ಜಂಟಿ ನಿರ್ದೇಶಕರನ್ನು ಭೇಟಿ ಮಾಡಲು ಮಾಜಿ ಸೈನಿಕರಿಗೆ ಅವಕಾಶ

14/01/2022

ಮಡಿಕೇರಿ ಜ.14 : ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಕಾರ್ಯಾಲಯದ ಜಂಟಿ ನಿರ್ದೇಶಕರನ್ನು (ಪ್ರಬಾರ) ಭೇಟಿ ಮಾಡಲು ಇಚ್ಛಿಸುವ ಮಾಜಿ ಸೈನಿಕರು, ವಾರದ ಗುರುವಾರ ಹಾಗೂ ಶುಕ್ರವಾರ ಕಾರ್ಯಾಲಯದ ಕೆಲಸದ ಸಮಯದಲ್ಲಿ ಭೇಟಿ ಮಾಡಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.