ವೃದ್ಧಾಶ್ರಮ ವ್ಯವಸ್ಥೆ : ಈ ದಿನಾಂಕದೊಳಗೆ ಸೈನಿಕ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿ

14/01/2022

ಮಡಿಕೇರಿ ಜ.14 : ಸಶಸ್ತ್ರ ಪಡೆಗಳಿಂದ ನಿವೃತ್ತಿಯಾದ ಸೈನಿಕರಿಗೆ, ಸೇನೆಯು ಅರೆ ಸರ್ಕಾರಿ ಸಂಸ್ಥೆಯೊoದಿಗೆ ವೃದ್ಧಾಶ್ರಮವನ್ನು ಪಾವತಿ ಆಧಾರದ ಮೇರೆಗೆ ಪ್ರಾರಂಭಿಸಲು ಯೋಜಿಸಿದೆ.
ಅದರ ಉಪಯೋಗವನ್ನು ಪಡೆಯಲಿಚ್ಚಿಸುವ ಮಾಜಿ ಸೈನಿಕರು(ನಿರಾಶ್ರಿತ, ತಬ್ಬಲಿ, ಅನಾಥ ಮಾಜಿ ಸೈನಿಕರ ಅವಲಂಬಿತರಿಗೆ ಅನುಕೂಲವಾಗುವಂತೆ) ತಮ್ಮ ಹೆಸರುಗಳ್ನು ಜನವರಿ, 20 ರೊಳಗೆ ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಕಚೇರಿಗೆ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.