ಸಂಪಾಜೆ : ಮಣ್ಣು ಪರೀಕ್ಷಾ ಘಟಕ ಉದ್ಘಾಟನೆ, ಕೋಳಿ ಸಾಕಾಣಿಕೆ ಘಟಕಕ್ಕೆ ಸಾಲ ವಿತರಣೆ

15/01/2022

ಮಡಿಕೇರಿ ಜ.15 : ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ  ಅತ್ಯಾಧುನಿಕ ಮಣ್ಣು ಪರೀಕ್ಷಾ ಘಟಕ ಉದ್ಘಾಟನೆಗೊಂಡಿದೆ.’ ಸ್ವಾವಲಂಬಿ’ ಮೊಟ್ಟೆ ಕೋಳಿ ಸಾಕಾಣಿಕೆ ಘಟಕಕ್ಕೆ ಸಾಲ ವಿತರಿಸುವ ಕಾರ್ಯಕ್ರಮವೂ ಇದೇ ಸಂದರ್ಭ ನಡೆಯಿತು. ವಿರಾಜಪೇಟೆ ಶಾಸಕ ಜೆ.ಜಿ.ಬೋಪಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ರವಿಕುಶಾಲಪ್ಪ, ಪ್ರಮುಖರಾದ ನಾಗೇಶ್ ಕುಂದಲ್ಪಾಡಿ, ಸಹಕಾರ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರುಗಳು ಉಪಸ್ಥಿತರಿದ್ದರು.