ವಿಷಪೂರಿತ ಮದ್ಯ ಸೇವನೆ : ಐವರ ಸಾವು

15/01/2022

ನಳಂದಾ ಜ.15 : ವಿಷಪೂರಿತ ಮದ್ಯ ಸೇವನೆಯಿಂದ ಐವರು ಮೃತಪಟ್ಟಿರುವ ಘಟನೆ ಶನಿವಾರ ಬಿಹಾರದ ನಳಂದಾದಲ್ಲಿ ನಡೆದಿದೆ.
ಸೊಹ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟಿ ಪಹಾಡಿ ಮತ್ತು ಪಹಾಡ್ ತಲ್ಲಿ ಗ್ರಾಮಗಳಲ್ಲಿ ಮದ್ಯ ಸೇವಿಸಿದವರು ಅಸ್ವಸ್ಥಗೊಂಡಿದ್ದರು. ತೀವ್ರವಾಗಿ ಆರೋಗ್ಯ ಹದಗೆಟ್ಟ ಪರಿಣಾಮ ಐವರು ಸಾವನ್ನಪ್ಪಿದರು.
ಸ್ಥಳಕ್ಕೆ ಆಗಮಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.