ಸಾಲ ಮರಳಿ ಕೇಳಿದಕ್ಕೆ ಅನೈತಿಕ ಸಂಬಂಧದ ಪಟ್ಟ : ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

15/01/2022

ಶಿವಮೊಗ್ಗ ಜ.15 : ಕೊಟ್ಟ ಸಾಲ ಮರಳಿ ಕೇಳಿದ ಕಾರಣಕ್ಕಾಗಿ ಅನೈತಿಕ ಸಂಬಂಧದ ಪಟ್ಟಕಟ್ಟಿದ್ದರಿಂದ ಮನನೊಂದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ವೀಣಾ, ಮಕ್ಕಳಾದ ಜ್ಞಾನವಿ (7) ಹಾಗೂ ದೈವಿಕಾ (1) ಸಾವಿಗೀಡಾದ ದುರ್ದೈವಿಗಳು. ಸುಮಾರು 8 ಲಕ್ಷ ರೂ. ಸಾಲ ಪಡೆದಿದ್ದ ದಂಪತಿ ವೀಣಾ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ. ಅನೈತಿಕ ಸಂಬಂಧದ ಅಪಪ್ರಚಾರದಿಂದ ಬೇಸತ್ತಿದ್ದ ವೀಣಾ ತನ್ನ ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರಿಗೆ ಡೆತ್ ನೋಟ್ ದೊರೆತ್ತಿದ್ದು, ಸಾಲ ಪಡೆದ ಸಂತೋಷ್ ಎಂಬಾತನನ್ನು ಬಂಧಿಸಿದ್ದಾರೆ.