ವೀಕೆಂಡ್ : ಕೊಡಗು ಬಹುತೇಕ ಸ್ತಬ್ಧ

15/01/2022

ಮಡಿಕೇರಿ ಜ.15 : ಸರಕಾರ ವೀಕೆಂಡ್ ಲಾಕ್‌ಡೌನ್ ಘೋಷಿಸಿದ ಪರಿಣಾಮ ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ಸೇರಿದಂತೆ ಎಲ್ಲಾ ತಾಲ್ಲೂಕುಗಳು ಜನರ ಓಡಾಟವಿಲ್ಲದೆ ಸ್ತಬ್ಧವಾಗಿತ್ತು. ವಾಹನಗಳ ಸಂಚಾರ ಕೂಡ ಇರಲಿಲ್ಲ, ಅಗತ್ಯ ವಸ್ತುಗಳ ಬೆರಳೆಣಿಕೆಯಷ್ಟು ಅಂಗಡಿಗಳು ತೆರೆದಿದ್ದವಾದರೂ ವ್ಯಾಪಾರವಿಲ್ಲದೆ ಬಣಗುಡುತ್ತಿದ್ದವು.