ಶಾಂತಳ್ಳಿ : ಸಬ್ಬಮ್ಮ ದೇವರ ಕೆರೆಯ ತಟದಲ್ಲಿ ವಿಶೇಷ ಪೂಜೆ

15/01/2022

ಸೋಮವಾರಪೇಟೆ ಜ.15 : ಸಂಕ್ರಾಂತಿ ಹಬ್ಬದಂದು ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೆ ಹಾಗೂ ರಥೋತ್ಸವ ಹಿನ್ನೆಲೆ ತಾಲ್ಲೂಕಿನ ಕೂತಿ ಗ್ರಾಮದ ಸಬ್ಬಮ್ಮ ದೇವರ ಕೆರೆಯ ತಟದಲ್ಲಿ ವಿಶೇಷ ಪೂಜೆ ನಡೆಯಿತು.
ಗ್ರಾಮದ ಒಕ್ಕಲಿಗ ಮನೆತನದ ಎಣಿಗೆ (ದೇವರ ಪಟ್ಟ, ಕಳಸ, ಹಣ್ಣು ಕಾಯಿ ಇತರೆ ಪದಾರ್ಥಗಳು) ತಂದಿಟ್ಟು ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಎಣಿಗೆ ಹೊತ್ತ ಮಹಿಳೆಯರು ಹಾಗು ಗ್ರಾಮಸ್ಥರು ಶಾಂತಳ್ಳಿಯ ಕುಮಾರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದರು.
ಈ ಸಂದರ್ಭ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಡಿ.ಮೋಹನ್, ಕಾರ್ಯದರ್ಶಿ ವಿನೋದ್ ಕುಮಾರ್, ಖಜಾಂಚಿ ಕಿಶನ್, ಪದಾಧಿಕಾರಿಗಳಾದ ಗಣೇಶ್, ಗಿರೀಶ್ ಸೇರಿದಂತೆ ಗ್ರಾಮಸ್ಥರು ಇದ್ದರು.