ಮಸೀದಿ ಕುರಿತು ವಿವಾದಾತ್ಮಕ ಹೇಳಿಕೆ : ಕಾಳಿ ಸ್ವಾಮಿಗೆ ಜಾಮೀನು

19/01/2022

ಮಡಿಕೇರಿ ಜ.19 : ಶ್ರೀರಂಗಪಟ್ಟಣ ಮಸೀದಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದ ಕಾಳಿ ಮಠದ ಕಾಳಿ ಸ್ವಾಮಿ (ರಿಷಿ ಕುಮಾರ್) ಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ.
ಶ್ರೀರಂಗಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯ ಷರತ್ ಬದ್ದ ಜಾಮೀನು ಮಂಜೂರು ಮಾಡಿ ಪ್ರತಿ ಭಾನುವಾರ ಪಟ್ಟಣದ ಠಾಣೆಗೆ ಹಾಜರಾಗಿ ಸಹಿ ಹಾಕುವಂತೆ ಆದೇಶಿಸಿದೆ.
ಸ್ವಾಮೀಜಿ ಪರ ಶ್ರೀರಂಗಪಟ್ಟಣದ ವಕೀಲ ಸಿದ್ದೇಶ್ ಹಾಗೂ ಬಾಲರಾಜ್ ಜಾಮೀನಿಗೆ ಅರ್ಜಿ ಸಲ್ಲಿಸಿದರು.