ಕೋವಿಡ್ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ : ಸೋಮವಾರಪೇಟೆ ಪ.ಪಂ ನಿರ್ಧಾರ

19/01/2022

ಸೋಮವಾರಪೇಟೆ ಜ.19 : ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
 ಪಟ್ಟಣ ಪಂಚಾಯಿತಿಯ ಕೋವಿಡ್ಡ್ ಟಾಸ್ಕ್ ಫೋರ್ಸ್ ಸಭೆಯು ಪಂಚಾಯ್ತಿ ಅಧ್ಯಕ್ಷ ಪಿ.ಕೆ.ಚಂದ್ರು ಅಧ್ಯಕ್ಷ ತೆಯಲ್ಲಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಇತ್ತೀಚೆಗೆ ಪಟ್ಟಣದಲ್ಲಿ ಕೋವಿಡ್ಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಬಗ್ಗೆ ಕಳವಳ ವ್ಯಕ್ತ ಪಡಿಸಿದ ಸದಸ್ಯರು ಕೋವಿಡ್ಡ್ ನಿಗ್ರಹಕ್ಕೆ ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಿಸಿದರು.
ಈ ಸಂದರ್ಭ ಮುಖ್ಯಾಧಿಕಾರಿ ನಾಚಪ್ಪ ಮಾತನಾಡಿ 11/01/22ರಿಂದ ಎಂಟು ದಿನಗಳ ಅವಧಿಯಲ್ಲಿ 29 ಮಂದಿಗೆ ಕೋವಿಡ್ ಸೋಂಕು ತಾಗುಲಿದ್ದು 29 ಮನೆಗಳನ್ನು ಸೀಲ್ಡೌನ್ ಮಾಡಲಾಗಿದ್ದು 6 ಮನೆಯ ಸೀಲ್ಡೌನ್ ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ಡ್ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕು ಆಡಳಿತ ಹಾಗೂ ಶಾಸಕರ ಸೂಚನೆತಂತೆ  ಪಟ್ಟಣದಲ್ಲಿ ನಡೆಯುವ ವಾರದ ಸಂತೆಯನ್ನು ಆಲೆಕಟ್ಟೆ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರ ಮಾಡುವಂತೆ  ನಿರ್ದರಿಸಲಾಯಿತು.
ಪಟ್ಟಣದಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವ ಸೋಂಕಿತರ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಪರಿಶೀಲನೆ ನಡೆಸುವ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಮಕ್ಕಳ ಹಿತ ದೃಷ್ಟಿಯಿಂದ ಪಟ್ಟಣ ವ್ಯಾಪ್ತಿಯಲ್ಲಿರುವ ಐದು ಅಂಗನವಾಡಿ ಕೇಂದ್ರಗಳಿಗೆ ಒಂದುವಾರ ರಜೆ ನೀಡುವಂತೆ  ತೀರ್ಮಾನ ಕೈಗೊಳ್ಳಲಾಗಿದೆ.
ಎಲ್ಲಾ ಅಂಗಡಿ ಮುಂಗಟ್ಟುಗಳ ಮಾಲೀಕರು,ಕೆಲಸದವರು ಕಡ್ಡಾಯವಾಗಿ ಮಾಸ್ಕ್ ಹಾಗೂ ಗ್ಲೌಸ್ ಧರಿಸಬೇಕು, ಹೋಟೆಲ್,ಕ್ಯಾಅಂಟೀನ್,ರೆಸ್ಟೋರೆಂಟ್,ಚಾಟ್ಸ್ ಗಳಲ್ಲಿ ಕುಡಿಯಲು ಬಿಸಿನೀರು ಕೊಡಬೇಕು, ಮಾಸ್ಕ್ ದರಿಸದೆ ಇದ್ದವರಿಗೆ ದಂಡ ವಿಧಿಸಬೇಕು, ಪಟ್ಟಣದಲ್ಲಿ ಈ ಬಗ್ಗೆ ಪ್ರಚಾರ ಪಡಿಸಿ ಹಾಗೂ ಎರೆಡು ದಿನಕೊಮ್ಮೆ  ಪಟ್ಟಣದಲ್ಲಿ ಸ್ಯಾನಿಟೈಝರ್ ಮಾಡುವಂತೆ ಸದಸ್ಯರುಗಳು ಸಲಹೆ ನೀಡಿದರು.
ಸದಸ್ಯರುಗಳಾದ ಶೀಲಾಡಿಸೋಜ, ಮೃತ್ಯುಂಜಯ, ಎಸ್.ಮಹೇಶ್,ಶುಭಕರ,ಜೀವನ್,ನಾಗರತ್ನ,ಮೋಹಿನಿ,ಪಂಚಾಯ್ತಿ ಹಾಗೂ ಪೊಲೀಸ್ ಅಧಿಕಾರಿಗಳು,ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.