ಜೆಸಿಬಿ ಮಗುಚಿ ಯುವಕ ಗಂಭೀರ : ಕೂತಿ ಗ್ರಾಮದಲ್ಲಿ ಘಟನೆ

20/01/2022

ಮಡಿಕೇರಿ ಜ.20 : ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜೆಸಿಬಿಯೊಂದು ಚಾಲಕ ನಿಯಂತ್ರಣ ತಪ್ಪಿ ಮಗುಚಿದ ಪರಿಣಾಮ ಯುವಕನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸೋಮವಾರಪೇಟೆ ಸಮೀಪದ ಕೂತಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ, ಪತ್ರಿಕಾ ವರದಿಗಾರ ಆಗಿರುವ ಲಕ್ಷ್ಮೀಕಾಂತ್ ತನ್ನ ತೋಟದಲ್ಲಿ ಜೆಸಿಬಿಯಲ್ಲಿ ಕೆಲಸ ಮಾಡಿಸಿ, ಹಿಂದಕ್ಕೆ ಹೋಗುತ್ತಿದ್ದ ಸಂದರ್ಭ ಕಡಿದಾದ ರಸ್ತೆಯಲ್ಲಿ ಜೆಸಿಬಿ ಮಗುಚಿದೆ. ಪಕ್ಕದಲ್ಲಿದ್ದ ಲಕ್ಷ್ಮೀಕಾಂತ್ ತೀವ್ರಗಾಯಗೊಂಡಿದ್ದಾರೆ.
ಕೂಡಲೇ ಗ್ರಾಮಸ್ಥರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅರಕಲಗೂಡು ಕೆಂಪಯ್ಯ ಎಂಬುವವರಿಗೆ ಸೇರಿದ ಜೆಸಿಬಿ ಹೊನ್ನರಾಜು ಎಂಬುವರರು ಚಾಲನೆ ನಡೆಸುತ್ತಿದ್ದರು.
ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.