ಕೆದಮುಳ್ಳೂರು ಬಾರಿಕಾಡು : ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ

20/01/2022

ಮಡಿಕೇರಿ ಜ.20 : *ಸೇವಾ ಭಾರತಿ, ಕೊಡಗು* ವತಿಯಿಂದ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಬಾರಿಕಾಡು ಪೈಸಾರಿಯಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಿ ಅವಶ್ಯಕತೆ ಇದ್ದವರಿಗೆ ಔಷಧ ವಿತರಿಸಲಾಯಿತು.  ಸುಮಾರು ನಲವತ್ತಕ್ಕೂ ಅಧಿಕ ಮಂದಿ ಪೈಸಾರಿ ನಿವಾಸಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಔಷಧಿಯನ್ನು ಪಡೆದುಕೊಂಡರು.ಕೊಡಗು ವೈದ್ಯಕೀಯ ಕಾಲೇಜಿನ ವೈದ್ಯರಾದ ಡಾ.ರಮ್ಯಶ್ರೀ, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಹಾಗೂ ಸಂಘದ ಕಾರ್ಯಕರ್ತ ಲಿಖಿತ್, ಕೆದಮುಳ್ಳೂರು ಸಮುದಾಯದ ಆರೋಗ್ಯ ಕೇಂದ್ರದ ಆಧಿಕಾರಿ ನಿತಿನ್ ತಪಾಸಣೆಯನ್ನು ಮಾಡಿ ಔಷಧ ವಿವರಿಸಿದರು.ಈ ಸಂದರ್ಭದಲ್ಲಿ ಸೇವಾ ಭಾರತಿ ಅಧ್ಯಕ್ಷರಾದ ಶ್ರೀ ಟಿ.ಸಿ.ಚಂದ್ರನ್, ವನವಾಸಿ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಶ್ರೀ ಚೆಕ್ಕೇರ ಮನು ಕಾವೇರಪ್ಪ, ಸೇವಾ ಭಾರತಿ ಪ್ರಮುಖರಾದ ಚಂದ್ರ ಉಡೋತ್, ಪದ್ಮನಾಭ ಹಾಗೂ ಇತರರು ಇದ್ದರು.