ಗೋಣಿಕೊಪ್ಪಲುವಿನಲ್ಲಿ ಹುಧಾ ಮೆಡಿಕಲ್ ಹೆಲ್ಪ್ ಲೈನ್ ಸಂಘಟನೆ ಅಸ್ತಿತ್ವಕ್ಕೆ

20/01/2022

ಗೋಣಿಕೊಪ್ಪಲು ಜ.20 : ಗೋಣಿಕೊಪ್ಪಲು ಗ್ರಾಮ ವ್ಯಾಪ್ತಿಯ ನಿವಾಸಿಗಳಿಗಾಗಿ  ಮೆಡಿಕಲ್ ಸಂಬಂಧಪಟ್ಟ ವಿಚಾರವಾಗಿ ಮೆಡಿಕಲ್ ಹೆಲ್ಪ್ ಲೈನ್ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ.
ಬಡ ರೋಗಿಗಳ ಆಸ್ಪತ್ರೆಯ ಖರ್ಚು ಭರಿಸುವುದು, ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇವೆ,  ಔಷಧಿ ಹಾಗೂ ಅವರಿಗೆ ಬೇಕಾಗಿರುವ ಸೌಲಭ್ಯಗಳನ್ನು ಒದಗಿಸುವುದು ಗೋಣಿಕೊಪ್ಪಲು ಹುಧಾ ಮೆಡಿಕಲ್ ಹೆಲ್ಪ್ ಲೈನ್ ಸಂಘಟನೆಯ ಉದ್ದೇಶವಾಗಿದೆ ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ.
::: ಪದಾಧಿಕಾರಿಗಳ ಆಯ್ಕೆ :::
ಅಧ್ಯಕ್ಷರಾಗಿ ಕೆಪಿ ಅಬ್ದುಲ್ ಸಲಾಂ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ.ಅಶ್ರಫ್, ಉಪಾಧ್ಯಕ್ಷರುಗಳಾಗಿ
 ಶಫೀಕ್ ಕೆ ವಿ, ರಶೀದ್ ಪಿ ಎ, ಶಂಸು ಪಿ ಎಂ, ಜಂಟಿ ಕಾರ್ಯದರ್ಶಿಯಾಗಿ ಇಬ್ರಾಹಿಂ ಕೆ ಹೆಚ್, ಸಲೀಂ ಪಿ ಎಂ, ಶಾಮೀಲ್ ಕೆ ಎಂ, ಖಜಾಂಚಿಯಾಗಿ ರಶೀದ್ ಎಮ್ ಎಮ್, ಸಂಚಾಲಕರಾಗಿ ಟಿ ಕೆ  ಅಬ್ದುಲ್ ಸಮದ್ , ನಿರ್ದೇಶಕರಾಗಿ  ರಝಾಕ್ , ಸುಬೇರ್ , ಅಫ್ಸಲ್ , ಸಿರಾಜ್ , ಫೈಝಲ್ ಆಯ್ಕೆಯಾದರು.
ಮುಂದಿನ ದಿನಗಳಲ್ಲಿ  ಸಮಿತಿಗೆ ಮತ್ತಷ್ಟು ಸದಸ್ಯರುಗಳನ್ನು ನೇಮಿಸಲಾಗುವುದು ಎಂದು ಸಂಘಟನೆಯ
ಸ್ಥಾಪಕ ಸದಸ್ಯರುಗಳಾದ ಶರಫುದ್ದೀನ್ ರಂಶಾದ್, ಶಮ್ಮು, ಮುನೀರ್, ಫಾಝಿಲ್  ತಿಳಿಸಿದ್ದಾರೆ.