ಮಂಜಿಕೆರೆ : ಜ.22 ರಂದು ಕಾರ್ಣಿಕ ಶ್ರೀ ಕೊರಗಜ್ಜ ದೈವದ ವಿಗ್ರಹ ಪ್ರತಿಷ್ಠಾಪನೆ

20/01/2022

ಸುಂಟಿಕೊಪ್ಪ, ಜ.20:ನಾಕೂರು ಶಿರಂಗಾಲದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜಿಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೈವಸ್ಥಾನದಲ್ಲಿ ಕಾರ್ಣಿಕ ದೈವ ಶ್ರೀ ಕೊರಗಜ್ಜ ದೈವದ ವಿಗ್ರಹ ಪ್ರತಿಷ್ಠಾಪನೆ ಜ.22ರಂದು ನಡೆಯಲಿದೆ.
ಅಂದುಬೆಳಿಗ್ಗೆ 5 ಗಂಟೆಗೆ ಕಾರ್ಕಳದಿಂದ ತರುವ ವಿಗ್ರಹ ಪ್ರತಿಷ್ಠಾಪನೆಯ ಪೂಜಾ ಕಾರ್ಯವನ್ನು ಅರ್ಚಕ ಕೆದಕಲ್ ಕೃಷ್ಣ ಭಟ್ ನೆರವೇರಿಸಲಿದ್ದಾರೆ. ಸಂಜೆ 6 ಗಂಟೆಯಿಂದ ರಾತ್ರಿ 11.30ರ ವರೆಗೆ ಕೊರಗಜ್ಜ ದೈವದ ಕೋಲ ಮತ್ತು ಅಗೇಲು ಸೇವೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದ್ದಾರೆ.