ಸಂಸ್ಕೃತ ಭಾಷೆಯ ಮೇಲಿನ ಮಮತೆ ಕೊಡವ, ತುಳು ಭಾಷೆಯ ಮೇಲೂ ಇರಲಿ : ಬಿ.ಕೆ.ಹರಿಪ್ರಸಾದ್

20/01/2022

ಮಡಿಕೇರಿ ಜ.20 : ಅವನತಿಯ ಹಾದಿಯಲ್ಲಿರುವ ಕೊಡವ ಮತ್ತು ತುಳು ಭಾಷೆಯನ್ನು ಕೇಂದ್ರ ಸರ್ಕಾರ 8 ನೇ ಪರಿಚ್ಚೇದಕ್ಕೆ ಸೇರಿಸಬೇಕು, ರಾಜ್ಯ ಸರ್ಕಾರ ಈ ಭಾಷೆಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಂಸ್ಕೃತ ಭಾಷೆಯ ಮೇಲಿರುವ ಮಮತೆಯನ್ನು ಈ ಎರಡು ಭಾಷೆಗಳ ಮೇಲೂ ತೋರಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ನಗರದ ಮಯೂರ ವ್ಯಾಲಿವ್ಯೂ ಹೊಟೇಲ್ ಸಭಾಂಗಣದಲ್ಲಿ ನಡೆದ “ತುಳು-ಕೊಡವ (ಕೊಡವ ತಕ್ಕ್) ಭಾಷೆಗಳ ಅಳಿವು ಉಳಿವು” ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಹಣಕಾಸಿನ ಬಲವಿಲ್ಲದ ಅಕಾಡೆಮಿಗಳನ್ನು ರಚಿಸಿ ಕೈ ತೊಳೆದುಕೊಳ್ಳುವುದು ಸರಿಯಾದ ಕ್ರಮವಲ್ಲ. ರಾಜ್ಯದ ಪ್ರಮುಖ ಅಲ್ಪಸಂಖ್ಯಾತ ಭಾಷೆಗಳಾದ ತುಳು ಮತ್ತು ಕೊಡವ ಭಾಷೆಗಳನ್ನು ಸಂವಿಧಾನದ 8 ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
2009ರ ಯುನೆಸ್ಕೋ ವಾರ್ಷಿಕ ವರದಿ ಪ್ರಕಾರ ಪ್ರಪಂಚದಲ್ಲಿ ಅವನತಿಯ ಹಾದಿಯಲ್ಲಿರುವ 181 ಭಾಷೆಗಳಲ್ಲಿ ಕೊಡವ ಭಾಷೆ ಕೂಡ ಸೇರಿಕೊಂಡಿದೆ. ಈ ಭಾಷೆಯನ್ನು ರಕ್ಷಿಸದಿದ್ದರೆ ಭಾಷಾ ವೈವಿಧ್ಯತೆ ನಾಶವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಸಂಸ್ಕöÈತ ಭಾಷೆಯ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಮೀಸಲಿಟ್ಟಿದ್ದು, ಕೊಡವ ಮತ್ತು ತುಳು ಭಾಷೆಯನ್ನು ಉಳಿಸಿಕೊಳ್ಳುವುದಕ್ಕೂ ಬದ್ಧತೆ ತೋರಲಿ ಎಂದರು.
ಕೊಡವ ಭಾಷೆ ನಶಿಸಿ ಹೋಗುವ ಪರಿಸ್ಥಿತಿಯಲ್ಲಿದ್ದು, ಕೊಡವರು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕೊಡವರ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿಗಳನ್ನು ಮ್ಯೂಸಿಯಂಗಳಲ್ಲಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಅದ್ಭುತ ಸಂಸ್ಕೃತಿಗೆ ಪೂರಕವಾದ ಕೊಡವ ಭಾಷೆ ನಶಿಸಿ ಹೋಗಬಾರದು. ಅನಾದಿ ಕಾಲದಿಂದಲೂ ಬಂದ ಸಂಸ್ಕೃತಿಯನ್ನು ಉಳಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು. ಭಾಷೆಯೊಂದಿಗೆ ಸಾಹಿತ್ಯ, ಸಂಸ್ಕೃತಿ ಬೆಳವಣಿಗೆ ಹೊಂದಲಿದ್ದು, ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಮತದಾನ ಮಾಡುವಾಗ ಯಾವುದೇ ಪಕ್ಷದವರಾಗಲಿ ಮೊದಲು ನಮ್ಮ ಭಾಷೆ, ಸಂಸ್ಕೃತಿಗೆ ಯಾರು ಹೆಚ್ಚು ಒತ್ತು ನೀಡುತ್ತಾರೋ ಅವರಿಗೆ ಮೊದಲ ಆದ್ಯತೆ ನೀಡುವಂತಾಗಬೇಕು ಎಂದು ಹರಿಪ್ರಸಾದ್ ಹೇಳಿದರು.
ನ್ಯಾಯವಾದಿ ಹಾಗೂ ಸಾಹಿತಿ ಕೆ.ಪಿ.ಬಾಲಸುಬ್ರಮಣ್ಯ ಅವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಒಂದು ಪ್ರದೇಶದ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಭಾಷೆ ಸಹಕಾರಿ. ಕೊಡವ ಮತ್ತು ತುಳು ಭಾಷೆಗೆ ಲಿಪಿ ಇಲ್ಲ ಎಂಬ ಕಾರಣಕ್ಕೆ ಸೂಕ್ತ ಸ್ಥಾನಮಾನ ನೀಡಲು ಅಪಸ್ವರ ಎದ್ದಿದ್ದು, ಭಾಷೆಗೆ ಲಿಪಿ ಮುಖ್ಯವಲ್ಲ ಎಂದರು.
ಅತ್ಯುತ್ತಮ ಮಟ್ಟದ ವಿಶ್ವ ಸಾಹಿತ್ಯಗಳನ್ನು ಕೊಡವ ಭಾಷೆಗೆ ತರ್ಜುಮೆ ಮಾಡುವ ಕೆಲಸ ಆದಾಗ ಮಾತ್ರ ಕೊಡವ ಭಾಷೆ ಪಸರಿಸಲು ಸಾಧ್ಯ ಎಂದ ಅವರು, ಪರಭಾಷೆಯ ಬಗ್ಗೆ ದ್ವೇಷ ಭಾವನೆ ಇರಬಾರದು, ಅದರಂತೆ ನಮ್ಮ ಭಾಷೆಯ ಬಗ್ಗೆ ಅಭಿಮಾನ ಇರಬೇಕು ಎಂದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಹಾಗೂ ಅಂಕಣಕಾರ ಪಿ.ಬ್ರಿಜೇಶ್ ಕಾಳಪ್ಪ ಮಾತನಾಡಿ, ಭಾಷೆ ಬೆಳೆದರೆ ಸಂಸ್ಕೃತಿಯೂ ಬೆಳೆದಂತೆ. ಆ ನಿಟ್ಟಿನಲ್ಲಿ ಹರಿಪ್ರಸಾದ್ ಅವರು ಯಾವುದೇ ಫಲಪೇಕ್ಷೆ ಇಲ್ಲದೆ ತುಳು-ಕೊಡವ ಭಾಷೆಯ ಬೆಳವಣಿಗೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಕೊಡವ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಒಂದು ಹೋರಾಟದ ಅಗತ್ಯವಿದ್ದು, ಅದಕ್ಕೆ ಪೂರ್ವ ತಯಾರಿಗಳು ನಡೆಯುತ್ತಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ, ಕೃತಿ ಸಂಪಾದಕ ಆರ್.ಜಯಕುಮಾರ್ ಮಾತನಾಡಿ, ಭಾಷೆ ಎನ್ನುವುದು ಒಂದು ಜನಜೀವನದ, ಸಂಸ್ಕೃತಿಯ ಭಾಗ. ಅದಕ್ಕೆ ತನ್ನದೇ ಆದ ಇತಿಹಾಸ, ಮಹತ್ವ ಇದೆ. ಆದರೆ ಏಕ ರಾಷ್ಟç, ಏಕ ಭಾಷೆ ಎನ್ನುವ ಮೂಲಕ ಎಲ್ಲವನ್ನು ನಾಶ ಮಾಡಲಾಗುತ್ತಿದೆ. ಪ್ರಪಂಚದ ಅರ್ಧ ಭಾಷೆ ಭಾರತದಲ್ಲಿದೆ, ಆದರೆ ಕನ್ನಡ ಸೇರಿದಂತೆ ದೇಶದ ಅರ್ಧ ಭಾಷೆಗಳು ಅಪಾಯದಂಚಿನಲ್ಲಿವೆ ಎಂದರು.
ಪ್ರಜಾಪ್ರಭುತ್ವದಲ್ಲಿ ಅದರಲ್ಲೂ ವಿಭಿನ್ನತೆಯಲ್ಲಿ ಏಕತೆಯ ದೇಶವಾದ ಭಾರತದಲ್ಲಿ ಪ್ರತಿ ಭಾಷೆ, ಸಂಸ್ಕೃತಿಗೆ ಗೌರವಪೂರ್ಣ ಸ್ಥಾನಮಾನ ಅಗತ್ಯ. ಅವುಗಳ ರಕ್ಷಣೆ, ಅದಕ್ಕೆ ಪೋತ್ಸಹ ಕೂಟ ಸರ್ಕಾರದ ಕರ್ತವ್ಯ. ಪ್ರತಿ ಭಾಷೆಗೆ ಸಂವಿಧಾನತ್ಮಕ ರಕ್ಷಣೆಯ ಅಗತ್ಯವಿದೆ. ಈ ಕಾರಣದಿಂದಲೇ ತುಳು ಮತ್ತು ಕೊಡವ ಭಾಷೆಗಳನ್ನು 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸಲು ಸರ್ಕಾರವನ್ನು ನಿರಂತವಾಗಿ ಒತ್ತಾಯಿಸುತ್ತ ಬರಲಾಗಿದೆ ಎಂದರು.
ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಭಾಷೆಗಳಾದ ತುಳು ಮತ್ತು ಕೊಡವ ಭಾಷೆಗಳನ್ನು ರಾಜ್ಯ ಸರಕಾರ ಮೊದಲು ತನ್ನ ಅಧಿಕೃತ ಭಾಷೆಗಳೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಕೊಡವರ ಸ್ವಾಭಿಮಾನದಿಂದ ಇಂದು ಭಾಷೆ, ಸಂಸ್ಕೃತಿ ಉಳಿದುಕೊಂಡಿದೆ. ಕೇವಲ ಕೊಡವರು ಮಾತ್ರ ಭಾಷೆಯ ಉಳಿವಿಗೆ ಹೋರಾಟ ನಡೆಸದೆ ಕೊಡಗಿನ ಶಾಸಕರು ಈ ಬಗ್ಗೆ ಧ್ವನಿ ಎತ್ತುವ ಕೆಲಸ ಮಾಡಬೇಕೆಂದು ಜಯಕುಮಾರ್ ತಿಳಿಸಿದರು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮಾತನಾಡಿ ಭಾರತ ಸರ್ಕಾರವು 1968ರಲ್ಲಿ ತ್ರಿಭಾಷಾ ಸೂತ್ರವನ್ನ ಜಾರಿಗೆತಂದಿದ್ದು ಆ ಸೂತ್ರದಂತೆ ಮಗುವಿಗೆ ಮಾತೃಭಾಷೆ, ರಾಜ್ಯಭಾಷೆ, ಮತ್ತು ಇಂಗ್ಲೀಷ್ ಅಥವಾ ಇನ್ಯಾವುದೇ ಭಾಷೆಯಲ್ಲಿ ಶಿಕ್ಷಣ ಪಡೆದುಕೊಳ್ಳುವುದು ಹಕ್ಕಾಗಿದೆ. ಆದರೆ ಈ ಹಕ್ಕು ಕೊಡವರ ವಿಚಾರದಲ್ಲಿ ಸಂಪೂರ್ಣ ಹತ್ತಿಕ್ಕಲ್ಪಟ್ಟಿದೆ. ಇದು ಮಾನವ ಹಕ್ಕು ಉಲ್ಲಂಘನೆ ಹಾಗೂ ಮಾನವ ಜನಾಂಗೀಯ ಅಳಿಸಿಹಾಕುವಿಕೆಯ ಮುಂದುವರಿದ ಭಾಗವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
2020ರವರೆಗೆ ಎಲ್ಲಾ ಕೊಡವರು ಈ ತ್ರಿಭಾಷಾ ಸೂತ್ರದ ಅವಕಾಶದಿಂದ ವಂಚಿತರಾಗಿದ್ದಾರೆ. ವಿಶಾಲ ರಾಜ್ಯಗಳಲ್ಲಿ ವಿಲೀನವಾಗುವ ಸಣ್ಣ ಸಮುದಾಯದ ಭಾಷೆ, ಸಂಸ್ಕೃತಿಯನ್ನು ಕಾಪಾಡಲು ಸಂವಿಧಾನದ 347 ಮತ್ತು 350ಬಿ ವಿಧಿ ಪ್ರಕಾರ ಅಂತಹ ಭಾಷೆಗಳ ಏಳಿಗೆಗೆ ಆಡಳಿತಾಂಗದಲ್ಲಿ ಮತ್ತು ಪಠ್ಯಕ್ರಮದಲ್ಲಿ ಅವಕಾಶ ನೀಡಿ ಅವರ ಸಂಸ್ಕೃತಿ ಮತ್ತು ಭಾಷೆ ಉಜ್ವಲವಾಗಲು ಅವಕಾಶ ನೀಡಲಾಗಿತ್ತು. ಇದೊಂದು ಸಂವಿಧಾನಿಕ ಜವಬ್ದಾರಿಯಾಗಿದೆ. ಅಂತೆಯೆ ಅಂತವರನ್ನು ರಾಜ್ಯದಲ್ಲಿ ಭಾಷಾ ಅಲ್ಪಸಂಖ್ಯಾತರಾಗಿ ಪರಿಗಣಿಸಿ ಸಂವಿಧಾನದ 29 ಮತ್ತು 30 ವಿಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಕಾಸವಾಗಲು ಅವಕಾಶ ಕಲ್ಪಿಸಲಾಗಿದೆ. ಇದೇ ಪ್ರಕಾರ ಅಂದರೆ 1956ರ ರಾಜ್ಯ ಪುನರ್ಘಟನಾ ಕಾಯಿದೆ ಸಂವಿಧಾನದ 7ನೇ ತಿದ್ದುಪಡಿಯಂತೆ ಕೊಡವರ ಯಾವುದೇ ಹಕ್ಕುಗಳನ್ನು ಕರ್ನಾಟಕದಲ್ಲಿ ಮಾನ್ಯ ಮಾಡಲಿಲ್ಲ. ಕರ್ನಾಟಕದಲ್ಲಿ ಅನ್ಯ ರಾಜ್ಯದ ತಮಿಳರು, ತೆಲುಗರು, ಮಲೆಯಾಳಿಗಳು, ಸಿಂಧಿಗಳು, ಗುಜರಾತಿಗಳೂ, ಕೊಂಕಣಿಗಳೂ, ತುಳುವರೂ ಮತ್ತು ಕೊಡವರೂ ಭಾಷಾ ಅಲ್ಪಸಂಖ್ಯಾತರಾಗಿದ್ದಾರೆ. ಆದರೆ ವಿಪರ್ಯಾಸವೆಂದರೆ ಕೊಡವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಭಾಷಾ ಅಲ್ಪಸಂಖ್ಯಾತರೆAದು ಪರಿಗಣಿಸಲ್ಪಟ್ಟು ಸಂವಿಧಾನದ 7ನೇ ತಿದ್ದುಪಡಿಯ ಎಲ್ಲಾ ಅವಕಾಶಗಳನ್ನ ಪಡೆಯುತ್ತಿದ್ದಾರೆ ಎಂದು ಗಮನ ಸೆಳೆದರು.
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ದೀರ್ಘಕಾಲದ ಹೋರಾಟದ ಕಾವು ತಟ್ಟಿಸಿಕೊಂಡ ಸರ್ಕಾರ 1994ರಲ್ಲಿ ಕೊಡವ, ತುಳು, ಮತ್ತು ಕೊಂಕಣಿ ಅಕಾಡಮಿಗಳನ್ನು ಅಸ್ತಿತ್ವಕ್ಕೆ ತಂದು ಈ ಮೂರು ಭಾಷೆಗಳ ಸರ್ವಾಂಗೀಣ ಏಳಿಗೆ, ವಿಕಾಸ, ಮತ್ತು ಬೆಳವಣಿಗೆಗೆ ಮುನ್ನುಡಿ ಬರೆದರು. ಆದರೆ ಕೊಡವ ಹೊರತು ಪಡಿಸಿ ತುಳು ಮತ್ತು ಕೊಂಕಣಿ ಅಕಾಡಮಿಗಳು ತಮಗೆ ವಹಿಸಿದ ಜವಾಬ್ದಾರಿ ಅಂದರೆ ಸಂವಿಧಾನದ ಏಳನೇ ತಿದ್ದುಪಡಿ ಅನ್ವಯ ತುಳು ಮತ್ತು ಕೊಂಕಣಿಗರಿಗೆ ಪ್ರತ್ಯೇಕ ಕೋಡ್‌ಗಳನ್ನು ನಿರ್ಮಿಸುವುದರ ಮೂಲಕ ನರ್ಸರಿ-ಒಂದನೇ ತರಗತಿಯಿಂದ ಪಿ.ಎಚ್‌ಡಿ ತನಕ ಪಠ್ಯಕ್ರಮದಲ್ಲಿ ಅಳವಡಿಸಿದ್ದಲ್ಲದೆ ಅವುಗಳನ್ನು ಆಡಳಿತ ಭಾಷೆಯಾಗಿ ಅಭಿವೃದ್ಧಿಪಡಿಸಿ ವಿಶ್ವಕೋಶಗಳನ್ನ ರಚಿಸಿದವು ಎಂದರು.
ಸಂಸ್ಕೃತ ವಿಶ್ವವಿದ್ಯಾನಿಲಯ ರಚನೆಗೆ ಮುಂದಾದ ಸರ್ಕಾರ ಅದೇ ತೆರನಾದ ಮಮತೆಯನ್ನು ತುಳು ಮತ್ತು ಕೊಡವ ಭಾಷೆಗಳಿಗೂ ನೀಡಿ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂದು ಪ್ರತಿಪಾದಿಸುತ್ತಿರುವಂತೆ ಕಳೆದ 20ವರ್ಷಗಳ ಹಿಂದೆ ಕೊಡವ ಕುಂದ್‌ನಲ್ಲಿ ನಳಂದಾ ವಿಶ್ವವಿದ್ಯಾನಿಲಯದ ಮಾದರಿಯಲ್ಲೆ ಜಾಗತಿಕ ಕೊಡವ ಶಾಸ್ತ್ರದ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಸಿಎನ್‌ಸಿ ಅಡಿಗಲ್ಲು ಹಾಕಿದಾಗ ಪಟ್ಟಬದ್ರ ಹಿತಾಸಕ್ತಿಗಳು ಕೆಲವು ದ್ರೋಹಿ ಕೊಡವರನ್ನು ಗುರಾಣಿಯನ್ನಾಗಿ ಬಳಸಿಕೊಂಡು ವಿಫಲಗೊಳಿಸಲಾಯಿತು ಎಂದು ಆರೋಪಿಸಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತೀ ಒಂದು ಜನಾಂಗವನ್ನು ಪ್ರತ್ಯೇಕವಾಗಿ ಗುರುತಿಸಿ ಸಬಲೀಕರಣಕ್ಕೆ ಮುನ್ನುಡಿ ಬರೆಯುವ ಹಿನ್ನಲೆಯಲ್ಲಿ ಕೊಡಗರು ಎಂದು ಅಶ್ಲೀಲ ಗೊಂಡಿರುವ ಕೊಡವ ಪದವನ್ನು ಮತ್ತೆ ಕಾಗುಣಿತ ತಿದ್ದುಪಡಿ ಮಾಡಿ ಕೊಡವ ಎಂದು ರಾಜ್ಯ ದಾಖಲೆಯಲ್ಲಿ ಘೋಷಿಸಲು ಸಿಎನ್‌ಸಿ ನ್ಯಾಯಾಲಯದ ಮೊರೆಹೋಗಬೇಕಾಯಿತು. ಇದೀಗ ತುರ್ತಾಗಿ ರಾಜ್ಯ ಶ್ರೇಷ್ಠನ್ಯಾಯಾಲಯ ಈ ಕುರಿತು ಕೊಡವರ ಪರವಾಗಿ ಹೊರಡಿಸಿದ ಮಹತ್ವಪೂರ್ಣ ತೀರ್ಪನ್ನು ಅನುಷ್ಠಾನಗೊಳಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.

ಕೊಡವ ಭಾಷೆಯನ್ನು ಕೊಂಕಣಿ ಮಾದರಿಯಲ್ಲೇ ರಾಜ್ಯದ ಮೂರನೇ ಭಾಷೆಯಾಗಿ ಜಾರಿಗೆ ತರುವುದು ಸಂವಿಧಾನದ ಏಳನೇ ತಿದ್ದುಪಡಿ ಅನ್ವಯ 1956ರ ರಾಜ್ಯ ಪುನರ್ಘಟನಾ ಕಾಯಿದೆಯಂತೆ ಕೊಡಗಿನಲ್ಲಿ ಸಂವಿಧಾನದ 347 ಮತ್ತು 350ಬಿ ವಿಧಿಪ್ರಕಾರ ಆಡಳಿತಾಂಗ ಮತ್ತು ಪಠ್ಯಕ್ರಮದಲ್ಲಿ ಒಂದನೇ ತರಗತಿಯಿಂದ ಪಿಎಚ್.ಡಿ ತನಕ ಜಾರಿಗೆ ತರುವುದು ಸೇರಿದಂತೆ ಜಾಗತಿಕ ಮಾನ್ಯತೆ ಬುಡಕಟ್ಟು ಸ್ಥಾನಮಾನ ಇದೆಲ್ಲದರ ಪರಿಗಣನೆಗಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ನಂದಿನೆರವoಡ ನಿಶಾ ಅಚ್ಚಯ್ಯ, ಚಂಬoಡ ಜನತ್, ಕಲಿಯಂಡ ಪ್ರಕಾಶ್ ಅಜ್ಜಿಕುಟ್ಟಿರ ಲೋಕೇಶ್, ಅಜ್ಜಿನಿಕಂಡ ಇನಿತ ಮಾಚಯ್ಯ, ಕೂಪದಿರ ಪುಷ್ಪ ಮುತ್ತಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ಪಟ್ಟಮಾಡ ಲಲಿತ ಗಣಪತಿ, ಮುಕ್ಕಾಟಿರ ರೋಸಿ ಗಣಪತಿ, ಪುಲ್ಲೇರ ಸ್ವಾತಿ ಕಾಳಪ್ಪ, ನಂದಿನೆರವoಡ ನಿಶಾ ಅಚ್ಚಯ್ಯ ಮತ್ತಿತರರು ಉಪಸ್ಥಿತರಿದ್ದರು.