ಕೊಡ್ಲಿಪೇಟೆ : ಶ್ರೀ ಸದಾಶಿವಸ್ವಾಮೀಜಿ ಆಂಗ್ಲ ಮಾಧ್ಯಮ ಶಾಲೆಗೆ ಶೇ 100 ಫಲಿತಾಂಶ

20/05/2022

ಕೊಡ್ಲಿಪೇಟೆ ಮೇ 20 : 2021-22 ನೇ ಸಾಲಿನ SSLC ಪರೀಕ್ಷೆಯಲ್ಲಿ ಕೊಡ್ಲಿಪೇಟೆ ಶ್ರೀ ಸದಾಶಿವಸ್ವಾಮೀಜಿ ಆಂಗ್ಲ ಮಾಧ್ಯಮ ಶಾಲೆಯು ಶೇ 100 ರಷ್ಟು ಫಲಿತಾಂಶ ಪಡೆದಿದ್ದು, 13 ರಷ್ಟು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
625 ಕ್ಕೆ 621 ಅಂಕವನ್ನು ಪಡೆದ ಮಾನ್ಯಶ್ರೀ ಪ್ರಥಮ, 615 ಅಂಕವನ್ನು ಪಡೆದ ನಿಶ್ಮಾ ದ್ವೀತಿಯ ಹಾಗೂ 601 ಅಂಕವನ್ನು ಪಡೆದ ನಮನ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶರಣ 588, ವಿನಯ 587, ಚೈತ್ರ 586, ಕುಮಾರಿ 579, ಚಿನ್ಮಯಿ ಪ್ರೇಮ್ 575, ನಿಹಾರಿಕ 573, ಶ್ರೀಕಾಂತ್ 568, ಅಕ್ಷಿತ 566, ಫಾತಿಮಾ ಎಲ್.ಐ 557, ಮೋನಿಷಾ 532 ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಅದರಂತೆಯೇ ತೃತೀಯ ಭಾಷೆ ಹಿಂದಿಯಲ್ಲಿ ಇಬ್ಬರು, ವಿಜ್ಞಾನದಲ್ಲಿ ಮೂವರು ಹಾಗೂ ಸಮಾಜ ವಿಜ್ಞಾನದಲ್ಲಿ ಏಳು ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ಒಟ್ಟು 34 ವಿದ್ಯಾರ್ಥಿಗಳಲ್ಲಿ 13 ಮಂದಿ ಉನ್ನತ ಶ್ರೇಣಿಯಲ್ಲಿ ಹಾಗೂ 21 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಉತ್ತಮ ಸಾಧನೆ ಮೆರೆದಿದ್ದಾರೆ.