ಸಿದ್ದಾಪುರ ಬಿ.ಜಿ.ಎಸ್. ಪಬ್ಲಿಕ್ ಸ್ಕೂಲ್ ಗೆ ಶೇ.100 ಫಲಿತಾಂಶ

20/05/2022

ಮಡಿಕೇರಿ ಮೇ 20 : ಶ್ರೀ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಗಳು (ರಿ) ಸಿದ್ದಾಪುರ- ಬಿ.ಜಿ.ಎಸ್. ಪಬ್ಲಿಕ್ ಸ್ಕೂಲ್ (ಆಂಗ್ಲ ಮಾಧ್ಯಮ) ಪ್ರತಿ ವರ್ಷದಂತೆ ಈ ಬಾರಿಯೂ ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಸಾಧನೆ ಮಾಡಿದೆ. ವಿದ್ಯಾರ್ಥಿನಿ ಮೇನಕ ಎಂ.ಆರ್. 598 (ಶೇ. 95.68) ಅಂಕವನ್ನು ಪಡೆದು ಶಾಲೆಗೆ ಮೊದಲ ಸ್ಥಾನ ಹಾಗೂ ರಕ್ಷಿತಾ ಹೆಚ್.ವಿ 595 (ಶೇ.95.2) ಅಂಕವನ್ನು ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.