ಮಾದಾಪುರ : ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

20/05/2022

ಸುಂಟಿಕೊಪ್ಪ ಮೇ 20 : ನಾಪತ್ತೆಯಾಗಿದ್ದ ಯುವಕನೊಬ್ಬನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಮಾದಾಪುರದ ತೋಟವೊಂದರಲ್ಲಿ ಪತ್ತೆಯಾಗಿದೆ.
ಮಾದಾಪುರ ಶ್ರೀಜಿತ್ ಮೆಡಿಕಲ್ಸ್ ನ ಮಾಲೀಕರಾದ ಸುಶ್ಮಾ ಅವರ ದ್ವಿತೀಯ ಪುತ್ರ ಎಂ.ಡಿ.ಹರ್ಷ(20) ಮೃತ ಯುವಕ. ಈತ ಮೇ 17 ರಂದು ನಾಪತ್ತೆಯಾಗಿದ್ದು, ಮಾದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗುರುವಾರ ಸಂಜೆ ತೋಟವೊಂದರಲ್ಲಿ ದುರ್ವಾಸನೆ ಬರುತ್ತಿದ್ದ ಸ್ಥಳವನ್ನು ಪರಿಶೀಲಿಸಿದಾಗ ಹರ್ಷನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸೋಮವಾರಪೇಟೆ ಪಿಎಸ್ ಐ ವಿರೂಪಾಕ್ಷ, ಮಾದಾಪುರ ಎಎಸ್ ಐ ಪೊನ್ನಪ್ಪ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.