ಮಡಿಕೇರಿ : ಅಪರಿಚಿತ ವಾಹನ ಡಿಕ್ಕಿ : ಬೈಕ್ ಸವಾರ ಸಾವು

20/05/2022

ಮಡಿಕೇರಿ ಮೇ 20 : ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ನಗರದ ಚೈನ್ ಗೇಟ್ ಬಳಿ ನಡೆದಿದೆ.
ಕುಶಾಲನಗರದ ಫುಡ್ ಡೆಲಿವೆರಿ ಬಾಯ್ ತೇಜಸ್ ತಿಮ್ಮಯ್ಯ (28) ಮೃತ ದುರ್ದೈವಿ. ಖಾಸಗಿ ಸಂಸ್ಥೆಯಲ್ಲಿ ಫುಡ್ ಡೆಲಿವೆರಿ ಬಾಯ್ ಆಗಿದ್ದ ತೇಜಸ್ ಮಡಿಕೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ಗ್ರಾಹಕರೊಬ್ಬರಿಗೆ ಫುಡ್ ನೀಡಲು ತೆರಳುತ್ತಿದ್ದಾಗ ಚೈನ್ ಗೇಟ್ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಆದರೆ ವಾಹನ ನಿಲ್ಲದೆ ಪರಾರಿಯಾಗಿದೆ. ತೇಜಸ್ ನನ್ನು ಜಿಲ್ಲಾ ಆಸ್ಪತ್ರೆಗೆ ಕರೆ ತಂದಾಗ ಮೃತಪಟ್ಟಿರುವುದು ಖಾತ್ರಿಯಾಗಿದೆ.
ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾದ ವಾಹನದ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.