ಹುಳುಕಡ್ಡಿ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು

28/05/2022

ನಿಮ್ಮ ಚರ್ಮದ ಮೇಲೆ ಕೆಂಪು ಬಣ್ಣ, ತುರಿಕೆ ಕಾಣಿಸಿಕೊಂಡು ಅದು ಕಾಲಾನಂತರದಲ್ಲಿ ಉಂಗುರದ ಆಕಾರಕ್ಕೆ ಬಂದರೆ ಇದನ್ನು ಹುಳುಕಡ್ಡಿ ಅಥವಾ ಹುಳುಕಡ್ಡಿ ಎಂದು ಕರೆಯುತ್ತಾರೆ.  ಮಾನವರಿಗೆ, ಬೆಕ್ಕಿನಂತಹ ಸಾಕುಪ್ರಾಣಿಗಳಿಗೆ ಮತ್ತು ಮನೆಯಲ್ಲಿ ಸಾಕುವ ಪ್ರಾಣಿಗಳಾದ ಕುರಿ ಮತ್ತು ಆಕಳುಗಳಲ್ಲಿ ಚರ್ಮಕ್ಕೆ ತಗಲುವ ಶಿಲೀಂಧ್ರಗಳ ಸೋಂಕಿನ ರೋಗವಾಗಿದೆ.ಹಲವಾರು ವಿವಿಧ ಬಗೆಯ ವರ್ಗದ ಶಿಲೀಂಧ್ರಗಳು ಇದಕ್ಕೆ ಕಾರಣವಾಗಿದೆ. ಆದರೆ ಪರಾವಲಂಬಿ ಜೀವಿಗಳು ಇದಕ್ಕೆ ಹೊರತಾಗಿದೆ. ಪರಾವಲಂಬಿಜೀವಿ ಸೋಂಕಿಗೆ (ಡರ್ಮಟೊಸೈಟೋಸಿಸ್) ಕಾರಣವಾಗುವ ಶಿಲೀಂಧ್ರಗಳು ಚರ್ಮ, ಕೂದಲು, ಮತ್ತು ಉಗುರಿನ ಹೊರ ಪದರದಲ್ಲಿರುವ ಕೆರಾಟಿನ್ ಅಂಶವನ್ನು ತಿನ್ನುತ್ತವೆ. ಈ ಶಿಲೀಂಧ್ರಗಳು ಚರ್ಮವು ಬೆಚ್ಚಗಿದ್ದಾಗ ಮತ್ತು ತೇವಗೊಂಡಿದ್ದಾಗಲೂ ಹೆಚ್ಚಾಗುತ್ತವೆ. ಕೂದಲಿನಲ್ಲಿ ಅಥವಾ ಅವುಗಳ ಒಳಭಾಗದಲ್ಲೂ ಬದುಕುತ್ತವೆ. ಶಿಲೀಂಧ್ರವು ಸಾಕುಪ್ರಾಣಿಗಳ, ಚರ್ಮದಲ್ಲಿ ಮತ್ತು ಕೂದಲಿನ ಹೊರಭಾಗದಲ್ಲಿ ರೋಗ ಅಸ್ತಿತ್ವದಲ್ಲಿರಲು ಕಾರಣವಾಗತ್ತವೆ.

ಚಿಹ್ನೆಗಳು ಹಾಗು ರೋಗ-ಲಕ್ಷಣಗಳು 

ದೇಹದ ಮೇಲಿನ ಸೋಂಕಿತ ಭಾಗವು ರಿಂಗ್‌ವರ್ಮ್‌ನ ಕೆಂಪು ವೃತ್ತಾಕಾರವನ್ನು ಹೆಚ್ಚಿಸಬಹುದು. ಪಾದದ ಚರ್ಮದ ಮೇಲಿನ ಸೋಂಕು ಕ್ರೀಡಾಪಟುಗಳ ಪಾದಗಳ ಮತ್ತು ತೊಡೆ ಸಂದಿಯ ಜಾಕ್ ತುರಿಕೆಗೆ ಕಾರಣವಾಗಬಹುದು. ಉಗುರುಗಳು ಸೋಂಕಿತವಾಗಿದ್ದಾಗ ಅವುಗಳು ದಪ್ಪಗಾಗುತ್ತವೆ ,ಬಣ್ಣಗೆಡುತ್ತದೆ, ಕೊನೆಗೆ ಚೂರು ಚೂರಾಗಿ ಉದುರಿಹೋಗುತ್ತವೆ ಅದನ್ನು ಒನಿಕೊಮೈಕೊಸಿಸ್ ಎಂದು ಕರೆಯಲಾಗುತ್ತದೆ.

ಇದು ವಯಸ್ಕರಲ್ಲಿ ಸಾಮಾನ್ಯ, ಸುಮಾರು ಶೇಕಡಾ ಇಪ್ಪತ್ತರಷ್ಟು ಜನರು ಯಾವುದಾದರೂ ಒಂದು ಸಮಯದಲ್ಲಿ ಇದಕ್ಕೆ ತುತ್ತಾಗುತ್ತಾರೆ.

ಡರ್ಮಟೊಫೈಟೊಸಿಸ್ ರೋಗಲಕ್ಷಣಗಳು ಚಳಿಗಾಲದಲ್ಲಿ ಕಡಿಮೆ ಕಾಣಿಸಿಕೊಂಡು ಬೇಸಿಗೆ ಕಾಲದಲ್ಲಿ ಅಧಿಕವಾಗುತ್ತವೆ.

ನಾಯಿಗಳು ಮತ್ತು ಬೆಕ್ಕುಗಳಂತಹ ಪ್ರಾಣಿಗಳು ಕೂಡ ರಿಂಗ್‌ವರ್ಮ್‌ಗೆ ತುತ್ತಾಗುತ್ತವೆ ಮತ್ತು ಅವುಗಳನ್ನು ಮುಟ್ಟಿದಾಗ ರೋಗವು ಮನುಷ್ಯ ಮತ್ತು ಪ್ರಾಣಿಗಳ ನಡುವೆ ವರ್ಗಾವಣೆಗೊಳ್ಳಬಹುದು.

ಕಾರಣಗಳು ಮತ್ತು ಮುನ್ನಚ್ಚರಿಕೆ :  ಶಿಲೀಂಧ್ರಗಳು ತೇವ ಪ್ರದೇಶದಲ್ಲಿ, ಬೆಚ್ಚಗಿನ ಪ್ರದೇಶಗಳಲ್ಲಿ ಅಧಿಕಕೊಳ್ಳುತ್ತವೆ, ಉದಾಹರಣೆಗೆ ಮುಚ್ಚಿದ ಕೋಣೆಗಳು, ಟ್ಯಾನಿಂಗ್ ಬೆಡ್‌ಗಳು ಈಜುಕೊಳ ಮತ್ತು ಮಡಚಿದ ಚರ್ಮಗಳು. ಶಿಲೀಂಧ್ರಗಳು ಯಾವುದೇ ರೋಗಲಕ್ಷಣ ತೋರದೆಯು ಇರಬಹುದು.

 ತಡೆಯಲು ಸಲಹೆಗಳು :  ಬಟ್ಟೆಗಳು, ಕ್ರೀಡಾ ಸಾಮಗ್ರಿಗಳು, ಟವೆಲ್‌ಗಳು, ಅಥವಾ ಹಾಸಿಗೆ ಬಟ್ಟೆಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸುವುದು.
ರಿಂಗ್‌ವರ್ಮ್ ಆಗಿರಬಹುದು ಎಂಬ ಸಂಶಯ ಉಂಟಾದಾಗ ಬಿಸಿ ನೀರಿನಿಂದ ಶಿಲೀಂಧ್ರನಾಶಕ ಸಾಬುನು ಬಳಸಿ ಬಟ್ಟೆಗಳನ್ನು ತೊಳೆಯಬೇಕು.
ಬರಿಗಾಲಿನಿಂದ ನಡೆಯುವುದನ್ನು ತಪ್ಪಿಸಬೇಕು. ಬದಲಾಗಿ ಸಮುದ್ರತೀರದಲ್ಲಿ ನಡೆಯುವಾಗ ಸರಿಯಾದ ಅಳತೆಯ ಸುರಕ್ಷತಾ ಬೂಟು ಧರಿಸಬೇಕು ಮತ್ತು ಮುಚ್ಚಿದ ಕೋಣೆಯಲ್ಲಿ ಚಪ್ಪಲಿಗಳನ್ನು ಬಳಸಬೇಕು.
ತುಂಬಾ ಸೋಂಕುಂಟಾಗಿರುವ ಭಾಗವನ್ನು ಬ್ಯಾಕ್ಟೀರಿಯಲ್ ನಿರೋಧಕ ಮತ್ತು ಆ‍ಯ್‌೦ಟಿ-ಶಿಲೀಂಧ್ರ ಸಾಬೂನು ಅಥವಾ ಟೆರ್ಪೈನೆನ್-೪-ಒಎಲ್ ಹೊಂದಿರುವ ಟೀ ಟ್ರಿ ಎಣ್ಣೆಯಿಂದ ಒಮ್ಮೆ ತೊಳೆಯಬೇಕು.
ಸಾಕುಪ್ರಾಣಿಗಳ ಕೂದಲುದುರಿದ ಭಾಗವನ್ನು ಮುಟ್ಟುವುದನ್ನು ತಪ್ಪಿಸಬೇಕು ಇವುಗಳು ಶಿಲೀಂಧ್ರಗಳನ್ನು ಹರಡಬಲ್ಲವು.

ಮನೆಮದ್ದು :

  • ಮಾನಸಿಕವಾಗಿ ಭಾರತೀಯರಿಗೆ ಪೂಜನೀಯ ಸ್ಥಾನದಲ್ಲಿರುವ ತುಳಸಿ ಗಿಡದ ಎಲೆಗಳಲ್ಲಿ ಔಷಧೀಯ ಗುಣಗಳು ಕೂಡ ಕಂಡು.ಬರುತ್ತವೆ. ಇದರಲ್ಲಿ ಆಂಟಿ ಇನ್ಫಾಮೇಟರಿ ಮತ್ತು ಆಂಟಿ ಫಂಗಲ್ ಸಂಯುಕ್ತಗಳು ಅಡಗಿದ್ದು ಚರ್ಮದ ಮೇಲಿನ ಸೋಂಕು ಒಂದು ಬದಿಯಿಂದ ಇನ್ನೊಂದು ಬದಿಗೆ ಹರಡುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗುತ್ತವೆ.

ಚರ್ಮದ ಮೇಲೆ ಉಂಟಾಗುವ ದದ್ದುಗಳು ಮತ್ತು ಕೆರೆತವನ್ನು ನಿವಾರಣೆ ಮಾಡುವುದರ ಜೊತೆಗೆ ಗಜಕರ್ಣದ ಸಮಸ್ಯೆಯಿಂದ ದೂರ ಮಾಡುವಲ್ಲಿ ತುಳಸಿ ಎಲೆಗಳು ಸಹಾಯಕ್ಕೆ ಬರುತ್ತವೆ. ತಾಜಾ ತುಳಸಿ ಎಲೆಗಳ ರಸವನ್ನು ಹಿಂಡಿಕೊಂಡು ಅದನ್ನು ಚರ್ಮದ ಮೇಲೆ ಹುಳುಕಡ್ಡಿಯ ಸೋಂಕು ಉಂಟಾಗಿರುವ ಜಾಗದಲ್ಲಿ ಅನ್ವಯಿಸಿ.

  • ಬೇರೆ ಬಗೆಯ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಅರಿಶಿನ ದಲ್ಲಿರುವ ಕ್ಯೂರ್ಕ್ಯುಮಿನ್ ತುಂಬಾ ಶಕ್ತಿಯುತವಾದ ಆಂಟಿ – ಸೆಪ್ಟಿಕ್ ಮತ್ತು ಆಂಟಿ – ಫಂಗಲ್ ಗುಣ ಲಕ್ಷಣಗಳನ್ನು ಒಳಗೊಂಡಿದೆ. ಹಾಗಾಗಿ ಚರ್ಮದ ಮೇಲೆ ಸೋಂಕು ಹರಡುವಿಕೆಯನ್ನು ಇದು ತಡೆಗಟ್ಟುತ್ತದೆ.
  • ಒಂದು ಚಪ್ಪಡಿ ಕಲ್ಲಿನ ಮೇಲೆ ನಟ್ಮೆಗ್ ಕಾಯಿಯನ್ನು ಚೆನ್ನಾಗಿ ಉಜ್ಜುವುದರಿಂದ ತುಂಬಾ ನುಣುಪಾದ ಪುಡಿ ಲಭ್ಯವಾಗುತ್ತದೆ. ಇದನ್ನು ನೀರಿನ ಜೊತೆ ಮಿಶ್ರಣ ಮಾಡಿ ಪೇಸ್ಟ್ ತಯಾರು ಮಾಡಿ ದಿನಕ್ಕೆ ಒಮ್ಮೆ ಹುಳುಕಡ್ಡಿ ಉಂಟಾಗಿರುವ ಜಾಗಕ್ಕೆ ಹಚ್ಚುತ್ತಾ ಬರಬಹುದು ನಟ್ಮೆಗ್ ನಲ್ಲಿ ಕೂಡ ಆಂಟಿ – ಸೆಪ್ಟಿಕ್ ಮತ್ತು ಆಂಟಿ – ಇಂಪ್ಲಾಮ್ಮೆಟರಿ ಗುಣ ಲಕ್ಷಣಗಳು ಇರುವುದರಿಂದ ನಿಮ್ಮ ಚರ್ಮದ ಮೇಲಿನ ಸಮಸ್ಯೆಯನ್ನು ಸುಲಭವಾಗಿ ಹೋಗಲಾಡಿಸುತ್ತದೆ.
  • ಒಗ್ಗರಣೆಯ ಆರಂಭದಲ್ಲಿ ಅಡುಗೆ ತಯಾರಿಯಲ್ಲಿ ಬಳಕೆ ಮಾಡುವ ಸಾಸಿವೆ ಕಾಳುಗಳಿಗೆ ಹುಳುಕಡ್ಡಿಯ ನಿವಾರಣೆ ಮಾಡುವ ಪ್ರಭಾವವನ್ನು ಉಂಟು ಮಾಡುವ ಗುಣವಿದೆ.

    ಇದಕ್ಕಾಗಿ ಸಾಸಿವೆ ಕಾಳುಗಳನ್ನು ಬಿಸಿ ನೀರಿನ ಜೊತೆ ಚೆನ್ನಾಗಿ ಮಿಶ್ರಣ ಮಾಡಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ಗಜಕರ್ಣದ ಸೋಂಕು ಉಂಟಾಗಿರುವ ಚರ್ಮದ ಭಾಗದ ಮೇಲೆ ಲೇಪಿಸಿಕೊಂಡರೆ ಇವುಗಳಲ್ಲಿ ಕಂಡು ಬರುವ ಅತ್ಯಧಿಕ ಸಲ್ಫರ್ ಪ್ರಮಾಣ ತನ್ನ ಆಂಟಿ – ಬ್ಯಾಕ್ಟೀರಿಯಲ್ ಮತ್ತು ಆಂಟಿ – ಫಂಗಲ್ ಗುಣ ಲಕ್ಷಣಗಳಿಂದ ಚರ್ಮದ ಸೋಂಕುಗಳು ನಿವಾರಣೆ ಮಾಡಬಲ್ಲದು.

  • ನೈಸರ್ಗಿಕವಾದ ತಾಜಾ ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಹುಳುಕಡ್ಡಿ ಉಂಟಾಗಿರುವ ಚರ್ಮದ ಭಾಗವನ್ನು ಮೃದುವಾಗಿಸಿ ಚರ್ಮದ ಒಣಗುವಿಕೆಯನ್ನು ಕಡಿಮೆ ಮಾಡಿ ಚರ್ಮದ ಭಾಗದಲ್ಲಿ ಹೆಚ್ಚು ತೇವಾಂಶವಿರುವಂತೆ ನೋಡಿಕೊಳ್ಳುವ ಮೂಲಕ ಸೋಂಕನ್ನು ನಿಯಂತ್ರಣ ಮಾಡುತ್ತದೆ.