ತೂಕ ಇಳಿಕೆಗಾಗಿ ಲಿಂಬೆ ಚಹಾ

10/06/2022

ಹೊಟ್ಟೆಯನ್ನು ಸ್ವಚ್ಛಗೊಳಿಸಿ ಬೇಡದ ಅಂಶಗಳನ್ನು ಹೊರಹಾಕಲು ಲಿಂಬೆ ಸಹಕಾರಿಯಾಗಿದೆ.  ಲಿಂಬೆ ಚಹಾ ತೂಕವನ್ನು ಇಳಿಸಿ ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ  ಉತ್ತಮ ಪಾತ್ರ ನಿರ್ವಹಿಸುತ್ತದೆ.  ಮನಸ್ಸನ್ನು ತಾಜಾಗೊಳಿಸಿ ಆರೋಗ್ಯವಂತರನ್ನಾಗಿಸುತ್ತದೆ.
ಲಿಂಬೆ ಚಹಾ ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ. ಶೀತ, ಕೆಮ್ಮು, ತಲೆನೋವು, ಸುಸ್ತು ಮುಂತಾದ ಕಾಯಿಲೆಗಳಿಗೂ  ರಾಮಬಾಣವಾಗಿದೆ.
ನಿಮ್ಮ ದೈನಂದಿನ ಜೀವನದಲ್ಲಿ ಲಿಂಬೆ ಚಹಾವನ್ನು ಸೇವಿಸುವುದು ನಿಮ್ಮನ್ನು ಚಟುವಟಿಕೆಯಿಂದ ಇರಿಸಲು ಪ್ರಮುಖ ಪಾತ್ರವಹಿಸುತ್ತದೆ.

ಸಾಮಾಗ್ರಿಗಳು : ಕಪ್ಪು ಚಹಾ ಎಲೆಗಳು – 1 ಟೇಸ್ಫೂನ್ ,  ಲಿಂಬೆ – 1,  ಏಲಕ್ಕಿ -1/2 ಇಂಚಿನ ಕೋಲು,
ಜೇನು – 1/2 ಟೇಸ್ಪೂನ್,

ಮಾಡುವ ವಿಧಾನ:   ಚಹಾ ಪಾತ್ರೆಯಲ್ಲಿ ನೀರನ್ನು ಇಡಿ. ಕಪ್ಪು ಚಹಾ ಎಲೆಗಳನ್ನು ಸೇರಿಸಿ ಅಥವಾ ಚಹಾ ಬ್ಯಾಗನ್ನು ಮುಳುಗಿಸಿ ಲಿಂಬೆ ರಸ, ಜೇನು ಮತ್ತು ಏಲಕ್ಕಿಯನ್ನು ಚಹಾ ಪಾತ್ರೆಗೆ ಹಾಕಿ.
ಮೂರು ನಿಮಿಷಗಳಷ್ಟು ಕಾಲ ಕುದಿಸಿ. ಚೆನ್ನಾಗಿ ಕುದಿದ ನಂತರ, ಕಪ್‌ಗೆ ಸೋಸಿ ಮತ್ತು ಲಿಂಬೆ ಹೋಳುಗಳಿಂದ ಅಲಂಕರಿಸಿ. ಲಿಂಬೆ ಚಹಾ ಸವಿಯಲು ಸಿದ್ಧವಾಗಿದೆ.
ಈ ತೂಕ ಇಳಿಸುವ ಪೇಯವನ್ನು ಬಿಸಿ ಇಲ್ಲವೇ ತಣ್ಣಗೆ ಸವಿಯಬಹುದು. ಇದು ಕೊಬ್ಬಿನ ಅಂಶಗಳನ್ನು ದೇಹದಿಂದ ತೊಡೆದುಹಾಕಿ ಗಂಟಲನ್ನು ಸೋಂಕಿನಿಂದ ರಕ್ಷಿಸುತ್ತದೆ.