ಮೂಡುಬಿದಿರೆಯ ಪುರಾತನ ಆಕಷ೯ಣೆ ಸಾವಿರ ಕಂಬದ ಬಸದಿ

10/06/2022

ಸಾವಿರ ಕಂಬದ ಬಸದಿಯು ಕರ್ನಾಟಕದ ಪ್ರಮುಖ ಬಸದಿ (ಜೈನ ಮಂದಿರ). ಈ ಮಂದಿರವನ್ನು ತ್ರಿಭುವನ ತಿಲಕ ಚೂಡಾಮಣಿ ಬಸದಿ ಎಂದೂ ಕರೆಯಲಾಗುತ್ತದೆ. 1000 ಕಂಬಗಳನ್ನು ಹೊಂದಿರುವ ಈ ಬಸದಿಯು, ಕರ್ನಾಟಕ ರಾಜ್ಯದ, ದಕ್ಷಿಣ ಕನ್ನಡ ಜಿಲ್ಲೆಯ, ಮೂಡುಬಿದಿರೆ ತಾಲೂಕು ಕೇಂದ್ರದಲ್ಲಿದೆ.

ಇತಿಹಾಸ
ಈ ಬಸದಿಯ ನಿರ್ಮಾಣವನ್ನು 1430 ರಲ್ಲಿ ಮಾಡಲಾಗಿದೆ. ಇದನ್ನು 1962 ರಲ್ಲಿ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ದೇವರಾಯ ಒಡೆಯರ್ ಜಿರ್ಣೋದ್ಧಾರ ಮಾಡಿದರು. ಇದರಲ್ಲಿ 60 ಅಡಿಯ ಒಂಟಿ ಸ್ತಂಭವಿದ್ದು, ಇದನ್ನು ಕಾಕ೯ಳದ ಭೈರವ ರಾಣಿ ನಾಗಳ ದೇವಿ ಸ್ಥಾಪಿಸಿದರು. ಈ ಒಂದೆ ಸ್ಥಳದಲ್ಲಿ 18 ದೇವಸ್ಥಾನಗಳು, 18 ರಸ್ತೆಗಳು, 18 ಕೆರೆಗಳು ಹಾಗು 18 ಬಸದಿಗಳಿವೆ. ಇವೆಲ್ಲವೂ ಮಂಗಳೂರಿನಿಂದ 37 ಕಿಲೊಮಿಟರ್ ದೂರವಿರುವ ಮೂಡಬಿದರೆಯಲ್ಲಿದೆ.
ಇಲ್ಲಿ ತುಂಬ ಬಿದಿರು ಗಳಿರುವ ಕಾರಣ ಈ ಪಟ್ಟಣಕ್ಕೆ ಮೂಡುಬಿದಿರೆ ಎಂಬ ಹೆಸರು ಬಂತು, ಮೂಡ- ಪೂವ೯ ಮತ್ತು ಬಿದಿರೆ- ಬಿದಿರು. ಮೂಡಬಿದಿರೆಯು ಚೌಟ ಎಂಬ ಕುಟುಂಬದ ಆಳ್ವಿಕೆಗೆ ಒಳಪಟ್ಟಿತ್ತು. ಅವರ ನಿಜವಾದ ಆಳ್ವಿಕೆ ಪುತ್ತಿಗೆ ಎಂಬ ಸ್ಥಳದಲ್ಲಿತ್ತು.ಅದು ಮೂಡುಬಿದಿರೆಯಿಂದ ೫ ಕಿ.ಮಿ. ದೂರದಲ್ಲಿದೆ. ಅವರು 17ನೇ ಶತಮಾನದಲ್ಲಿ ಮೂಡಬಿದಿರೆಯನ್ನು ರಾಜಧಾನಿಯಾಗಿ ಮಾಡಿಕೊಂಡರು.
ಅಲ್ಲಿ ಅವರು ಅರೆಮನೆಯನ್ನು ನಿಮಿ೯ಸಿದರು ಅದನ್ನು ಈಗಲೂ ನೋಡ ಕಾಣಬಹುದು. ಮೂಡುಬಿದಿರೆಯು ಪುರಾತನ ಆಕಷ೯ಣೆಯನ್ನು ಈಗಲೂ ಉಳಿಸಿಕೊಂಡಿದೆ. ಹಲವು ಜೈನ ಹಬ್ಬಗಳನ್ನು ವಷ೯ವಿಡಿ ಆಚರಿಸಲಾಗುತ್ತದೆ. ಇಲ್ಲಿ ಸುಂದರವಾದ ಜೈನ ತೀಥ೯ಂಕರ ಮೂತಿ೯ಗಳಿವೆ. ಪ್ರತಿಯೊಂದು ಜೈನ ಬಸದಿಯಲ್ಲೂ ಯಕ್ಷ ಮತ್ತು ಯಕ್ಷಿಣಿ ಇವೇ. ಮೂಡುಬಿದಿರೆಯಲ್ಲಿ ಜೈನ ಧಮ೯ದ ಇತಿಹಾಸವು 13ನೇ ಶತಮಾನದಲ್ಲಿ ಪ್ರಾರಂಭವಾಯಿತು.
ಆದರೆ 14 ಮತ್ತು ನೇ 16 ಶತಮಾನದ ಜೈನ ಧಮ೯ದ ಸಂಸ್ಕೃತಿ, ಕಲೆ ಮತ್ತು ವಾಸ್ತುಶಿಲ್ಪ ಈ ಸ್ಥಳದ ಬೆಳವಣಿಗೆ ಸಾಕ್ಷಿಯಾಗಿದೆ. ತ್ರಿಭುವನ ತಿಲಕ ಚೂಡಮಣಿ ಬಸದಿಯು ಕರ್ನಾಟಕದ ಕರಾವಳಿ ತೀರದ ದೊಡ್ಡ ಬಸದಿ ಎನ್ನಲಾಗುತ್ತದೆ. ಇದೊಂದು ಅಮೂಲ್ಯವಾದ ಜೈನ ದೇವಸ್ಥಾನ,ಯಾಕೆಂದರೆ ಇದರಲ್ಲಿ ವಿವಿಧ ತರಹದ ಸಾವಿರ ಸ್ತಂಭಗಳು ಇವೆ. ಇವುಗಳಿಂದಲೇ ಈ ಮಂದಿರವು ಸಾವಿರ ಕಂಬಗಳ ಬಸದಿ ಎಂದು ಜನಜನಿತವಾಗಿದೆ.