ಕಣಿವೆಗೆ ಬಿದ್ದ ಶಾಲಾ ಬಸ್ : 16 ಮಂದಿ ಸಾವು

04/07/2022

ಹಿಮಾಚಲ ಪ್ರದೇಶ ಜು.4 : ಶಾಲಾ ಬಸ್ ವೊಂದು ಕಣಿವೆಗೆ ಬಿದ್ದ ಪರಿಣಾಮ ವಿದ್ಯಾರ್ಥಿಗಳು ಸೇರಿದಂತೆ 16 ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಸೈಂಜ್ ಕಣಿವೆಯ ನ್ಯೂಲಿ-ಶಂಶಾರ್ ರಸ್ತೆಯಲ್ಲಿ ನಡೆದಿದೆ.
ಕುಲು-ಸೈಂಜ್‌ಗೆ ಬಳಿ ಸೋಮವಾರ ಬೆಳಗ್ಗೆ ಶಾಲಾ ಬಸ್ಸು ಹೋಗುತ್ತಿದ್ದಾಗ ಭೀಕರ ಅಪಘಾತ ನಡೆದಿದ್ದು, 16 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಶಾಲಾ ಬಸ್ಸಿನಲ್ಲಿ 45 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.