ಚೆಟ್ಟಳ್ಳಿ ಪ್ರೌಢ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನೆ

05/07/2022

ಮಡಿಕೇರಿ ಜು.5 :   ಚೆಟ್ಟಳ್ಳಿ ಪ್ರೌಢ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಶಾಲಾ ಮಂಗಳ ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಸಂಟಿಕೊಪ್ಪ  ಸ್ವಸ್ತ ಸಂಸ್ಥೆಯ ಸಂಯೋಜಕ  ಎಸ್. ಮರುಗೇಶ್ ವಿದ್ಯಾರ್ಥಿ  ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನದೊಂದಿಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿ ಕೊಳ್ಳುವ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳ ಬೇಕೆಂದರು.

ಶಾಲೆಯ ಹಳೆವಿದ್ಯಾರ್ಥಿ ವಸಂತ್ ರೈ ಮಾತನಾಡಿ ಶಾಲಾ ದಿನಗಳನ್ನು ನೆನಪಿಸಿಕೊಂಡರು.

ಶಾಲಾ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ ಮಾತನಾಡಿ, ಪ್ರಜಾಪ್ರಭುತ್ವದ ವಿಷಯಗಳನೆಲ್ಲ ಅರಿತು ಸಮಾಜದಲ್ಲಿ ಉತ್ತಮ ನಾಯಕನಾಗಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ  ಜಿ.ಸಿ.ಸತ್ಯ ನಾರಾಯಣ,  ವಿದ್ಯಾರ್ಥಿ ಸಂಘ  ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಲಿದೆ.  ಶಿಸ್ತು, ವಿನಂಮ್ರತೆ, ಆತ್ಮವಿಶ್ವಾಸ ದಿಂದ ಮುನ್ನಡೆಯ ಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಶಾಲಾ ವಿದ್ಯಾರ್ಥಿ ಸಂಘದ ಉಪಾದ್ಯಕ್ಷೆ ಹಾಗೂ ಕನ್ನಡ ಶಿಕ್ಷಕಿ ಯು. ಸುನಂದಾ ಸ್ವಾಗತಿಸಿದರು.  ವಿದ್ಯಾರ್ಥಿನಾಯಕರೆಲ್ಲರು ಪ್ರಮಾಣ ವಚನ ಸ್ವೀಕರಿಸಿದರು. ಶಿಕ್ಷಕಿಯರಾದ ಫಸಿಲಾ, ರೇಷ್ಮ ಅತಿಥಿಗಳನ್ನು ಪರಿಚಯಿಸಿದರು.  ಶಾಲಾ ವಿದ್ಯಾರ್ಥಿ ನಾಯಕ ಮಿದ್ರಾಜ್ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ  ಮಕ್ಕಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ ನೆರವೇರಿತು.