ಮರ್ಕಝ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ಮತ್ತು ಪೋಷಕರ ಸಭೆ

05/07/2022

ಮಡಿಕೇರಿ ಜು.5 :   ಕೊಟ್ಟಮುಡಿ ಮರ್ಕಝ್ ಪಬ್ಲಿಕ್  ಸ್ಕೂಲ್‍ನಲ್ಲಿ  “ಮೀಟ್ ಮತ್ತು ಗ್ರೀಟ್  ಪೇರೆಂಟ್ಸ್ ಮೀಟಿಂಗ್” ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ವಿದ್ಯಾರ್ಥಿಗಳು  ಏಕಾಗ್ರತೆಯಿಂದ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿದ್ದಲ್ಲಿ ಮಾತ್ರ ಸಾಧನೆ ಮಾಡಲು ಸಾಧ್ಯ.  ಸಾಂಸ್ಕೃತಿಕ ವೈವಿಧ್ಯವಿರುವ ಸಮಾಜದಲ್ಲಿ ಪರಸ್ಪರ ಬಾಂಧವ್ಯ ಬೆಸೆಯುವ ಕಾರ್ಯ ಹಾಗೂ ಸಮಾಜಮುಖಿ ಚಿಂತನೆಗಳೆಡೆಗೆ ಮಕ್ಕಳು ಬೆಳೆಯಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ  ಎಂ.ಎ ಅಬ್ದುಲ್ಲ ವಿದ್ಯಾರ್ಥಿಗಳ ಏಳಿಗೆಯಲ್ಲಿ ಶಿಕ್ಷಕರ ಹಾಗೂ ರಕ್ಷಕರ ಪಾತ್ರ ಮಹತ್ತರ. ಜೀವನದ ಏರಿಳಿತಗಳ ಎಲ್ಲಾ ಮಜಲುಗಳಲ್ಲಿ ಮಕ್ಕಳನ್ನ ಬೆನ್ನುತಟ್ಟಿ ಪ್ರೋತ್ಸಾಹಿಸುವುದು ಶಿಕ್ಷಕರು ಹಾಗೂ ರಕ್ಷಕರ ಹೊಣೆಗಾರಿಕೆಯಾಗಿದೆ ಎಂದು   ಎಂ.ಎ ಅಬ್ದುಲ್ಲ  ಅಭಿಪ್ರಾಯಪಟ್ಟರು.

ಪ್ರತ್ಯೇಕ ತರಗತಿಗಾಗಿ ಕೇರಳದಿಂದ ಆಗಮಿಸಿದ ಮರ್ಕಝ್ ಗ್ರೂಪ್ ಆಫ್ ಸ್ಕೂಲಿನ ಸಿ.ಇ.ಒ ಅಬ್ದುಲ್ ಖಾದರ್  ಹಾಗೂ  ಮರ್ಕಝುಲ್ ಹಿದಾಯ ಎಜುಕೇಷನಲ್ ಸೆಂಟರಿನ ಜನರಲ್ ಮ್ಯಾನೇಜರ್ ಇಸ್ಮಾಯಿಲ್ ಸಖಾಫಿ ಪ್ರಾಸ್ತಾವಿಕ ಭಾಷಣ  ಮಾಡಿದರು.

ಶಾಲಾ ಕಾರ್ಯದರ್ಶಿ ಮುಹಮ್ಮದ್ ಹಾಜಿ  ಸ್ವಾಗತಿಸಿ, ಮರ್ಕಝ್ ಸಂಸ್ಥೆಯ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಿದರು.

ಶಾಲೆಯ ಪ್ರಾಂಶುಪಾಲೆ ನಸ್ರಿಯಾ ಶೈಕ್ಷಣಿಕ ವರದಿಯನ್ನ ಮಂಡಿಸಿದರು. ರಿಫಾಯಿ ( ಇಂಟರ್ ನ್ಯಾಶನಲ್ ಇಂಗ್ಲಿಷ್ ಟ್ರೈನರ್) ವಿದ್ಯಾರ್ಥಿ ಮತ್ತು ರಕ್ಷಕರಿಗೆ ಪ್ರತಿಜ್ಞೆಯನ್ನಬೋಧಿಸಿದರು.  ವಿದ್ಯಾರ್ಥಿ  ನಾಯಕ ಹುಸೈನ್  ಸರ್ವರನ್ನು ವಂದಿಸಿದರು.

ವರದಿ : ನೌಫಲ್ ಕಡ0ಗ