ನಾಪೋಕ್ಲು : ಶೌರ್ಯ ಘಟಕದಿಂದ ಸ್ವಚ್ಛತಾ ಶ್ರಮದಾನ

05/07/2022

ನಾಪೋಕ್ಲು ಜು.5 :  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು  ದೇವಾಲಯದ ಸುತ್ತ  ಸ್ವಚ್ಛತಾ ಶ್ರಮದಾನ ನಡೆಸಿದರು.

ಹಳೇ ತಾಲೂಕು ಶ್ರೀ ಭಗವತಿ ದೇವಾಲಯದ ಸಮುದಾಯ ಭವನ ಹಾಗೂ ದೇವಾಲಯದ ಆವರಣದಲ್ಲಿ ಬೆಳೆದಿದ್ದ ಕುರುಚಲು ಗಿಡ ಗಂಟಿಗಳನ್ನು  ಶುಚಿಗೊಳಿಸಿದರು.

ಈ ಸಂದರ್ಭ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಉಮಾಲಕ್ಷ್ಮಿ, ಹರ್ಷಿತ್, ಪ್ರಿಯಾಂಕ, ಗೀತಾ,ಸ್ವಪ್ನ,ಪ್ರಿನ್ಸಿ ಮತ್ತಿತರರು ಪಾಲ್ಗೊಂಡಿದ್ದರು.

ವರದಿ :ಝಕರಿಯ ನಾಪೋಕ್ಲು