ಸುಳುಗಳಲೆ : ಸ್ನಾನದ ಕೊಠಡಿ ಕುಸಿದು ವೃದ್ಧೆ ಗಂಭೀರ ಗಾಯ

05/07/2022

ಮಡಿಕೇರಿ ಜು.5 :    ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ  ಸ್ನಾನದ ಕೊಠಡಿ ಕುಸಿದು ವೃದ್ಧೆ   ಗಂಭೀರ ಗಾಯಗೊಂಡ  ಘಟನೆ ಶನಿವಾರಸಂತೆಯ  ಸುಳುಗಳಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ವಸಂತಮ್ಮ (69) ಗಾಯಗೊಂಡ ಮಹಿಳೆ. ಎರಡು ಕಾಲು, ಮುಖ ಹಾಗೂ ಕಣ್ಣಿಗೆ ತೀವ್ರ ಗಾಯಗಳಾಗಿದ್ದು, ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.