ಕಾಕಮಾಚಿ (ಗಣಿಕೆ) ಸೊಪ್ಪಿನ ಔಷಧಿಯ ಗುಣಗಳು

22/07/2022

ಕಾಕಮಾಚಿ (ಗಣಿಕೆ)  ಸೊಪ್ಪು ಉಷ್ಣವಲಯದ ಎಲ್ಲಾ ಪ್ರದೇಶಗಳಲ್ಲಿಯೂ ಬೆಳೆಯುವುದು. ಕೆಲವು ಕಡೆ ಔಷಧಿಗಾಗಿ ಸಾಗುವಳಿ ಮಾಡಿ ಬೆಳೆಯುವ ಪದ್ದತಿಯೂ ಇದೆ.

ಕಾಕಮಾಚಿ (ಗಣಿಕೆ) ಸೊಪ್ಪಿನ ಎಂಟು ರಸಗಳಿವೆ. ಮಕ್ಕಳ ಆರೋಗ್ಯ ಕಾಪಾಡಲು ಇದನ್ನು ಬಳಸುವರು. ಇದು ಕಫ ನಾಶಕ. ಹೃದ್ರೋಗ ಸಮಸ್ಯೆಗೂ, ಕೆಮ್ಮು ಉಪಶಮನಕ್ಕೂ ಉತ್ತಮ ಔಷಧಿ ಎಂದು ಹೇಳಲಾಗಿದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದಾಗ ಇದರ ಚಿಗುರಿನ ಕುಡಿಯ ತಂಬಳಿ ಉಪಕಾರಿ ಎಂದು ಹೇಳಲಾಗಿದೆ.

ಇದು ಇಸುಬು, ತುರಿಕೆಯಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ಗಣಿಕೆ ಸೊಪ್ಪು ಉತ್ತಮ ಮನೆಮದ್ದಾಗಿದೆ. ಚರ್ಮದ ಮೇಲೆ ಏಳುವ ಬೆವರು ಗುಳ್ಳೆಗಳು ಅಥವಾ ರಾಶಸ್‌ಗಳ ಸಮಸ್ಯೆ ಕಾಡುತ್ತಿದ್ದರೆ ಗಣಿಕೆ ಸೊಪ್ಪಿನ ಕಷಾಯ ಮಾಡಿ ಸೇವಿಸಿ.

ಚಿಕ್ಕ ಮಕ್ಕಳಿಗೆ ಇದರ ಸೊಪ್ಪನ್ನು ಅರೆದು ಬಿಸಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಬೆಚ್ಚನೆಯ ಮಿಶ್ರಣವನ್ನು ಹಚ್ಚಿದರೆ ಕಜ್ಜಿ, ತುರಿ ಬಾಧೆ ಬರುವುದಿಲ್ಲ, ಬಂದರೆ ವಾಸಿಯಾಗುವುದು. ಸಾಮಾನ್ಯವಾಗಿ 15 ದಿನಕ್ಕೊಮ್ಮೆ ಇದರ ಸೊಪ್ಪಿನ ಮತ್ತು ಕೊಬ್ಬರಿ ಎಣ್ಣೆಯ ಮಿಶ್ರಣವನ್ನು ಚಿಕ್ಕ ಶಿಶುಗಳ ಮೈಗೆ ಹಚ್ಚಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡಿಸುವುದು ಮಲೆನಾಡಿನಲ್ಲಿ ರೂಢಿಯಲ್ಲಿದೆ.

ಇದು ಮಲಬದ್ದತೆ ನಿವಾರಿಸಲು ಬಹಳ ಉಪಕಾರಿ. ಇದರ ತಂಬಳಿ ಮಾಡಿ ಉಪಯೋಗಿಸಬಹದು. ಇದರ ಔಷಧೀಯ ಗುಣಕ್ಕಾಗಿ ಈ ಗಿಡದ ಸೊಪ್ಪನ್ನು ಕೆಲವರು ಸಾರು ಹುಳಿ ಪಲ್ಯಗಳಲ್ಲಿಯೂ ಬಳಸುವರು.
ಮಲೆನಾಡಿನಲ್ಲಿ ಇದರ ತಂಬಳಿ ಮಾಡುವರು.  ಕಾಕ ಮಾಚಿ ಗಿಡವನ್ನು ಅರೆದು ಕುದಿಸಿ ಮಾಡಿದ ಕಷಾಯ ಮೂಲವ್ಯಾಧಿ, ಚರ್ಮ ರೋಗಕ್ಕೆ, ಪಿತ್ತಕೋಶದ ಸಮಸ್ಯೆಗಳಿಗೆ ಔಷಧವಾಗಿದೆ.
ಇದರಲ್ಲಿ ಹಳದಿ ಬಣ್ಣದ ಸ್ವಲ್ಪ ದೊಡ್ಡ ತಳಿಯೂ ಇದೆ.