ಮಾನಸಿಕ ಸಮಸ್ಯೆ : ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಿರಿ

22/07/2022

ಮಡಿಕೇರಿ ಜು.22 : ಜಿಲ್ಲೆಯಲ್ಲಿ ಮುಂಗಾರು ಸಂದರ್ಭದಲ್ಲಿ ಧಾರಾಕಾರ ಮಳೆಯಿಂದ ಮತ್ತು ಭೂ ಕುಸಿತದಿಂದ ಜನರ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಇದರಿಂದ ಜನರಲ್ಲಿ ಭಯ, ಆತಂಕ, ಚಿಂತೆ, ದುಃಖ, ನಿಸ್ಸಾಹಯಕತೆ, ನಿದ್ರೆ ಬಾರದಿರುವುದು, ಕೋಪ ಮತ್ತು ಹತಾಶೆ ಅಂತಹ ಮನೋ ಸಾಮಾಜಿಕ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಆ ನಿಟ್ಟಿನಲ್ಲಿ ಹತ್ತಿರದ ಕುಟುಂಬಸ್ಥರಲ್ಲಿ ಅಥವಾ ಪರಿಚಯಸ್ಥರಲ್ಲಿ ಮಾನಸಿಕ ಸಮಸ್ಯೆಗಳು ಕಂಡುಬಂದಲ್ಲಿ, 080-46110007 ನಿಮ್ಹಾನ್ಸ್ ರಾಷ್ಟ್ರೀಯ ಮನೋ ಸಾಮಾಜಿಕ ಬೆಂಬಲ ಸಹಾಯವಾಣಿಗೆ ಕರೆಮಾಡಿ ಸಹಾಯ ಪಡೆದುಕೊಳ್ಳಬಹುದು ಎಂದು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ತಿಳಿಸಿದೆ.