ಮನೆಹಾನಿ : ಭಾಗಮಂಡಲ ಹೋಬಳಿ ನಿವಾಸಿಗಳಿಗೆ ಚೆಕ್ ವಿತರಣೆ

12/08/2022

ಮಡಿಕೇರಿ ಆ.12 : ಭಾಗಮಂಡಲ ಹೋಬಳಿಯ ಕೊಳಗದಾಳು ಗ್ರಾಮದ ನಿವಾಸಿ ಬಿ.ಎ.ಇಂದಿರ ಹಾಗೂ ಕುಂದಚೇರಿ ಗ್ರಾಮದ ಸಿ.ಜಿ.ರಾಮಣ್ಣ ಅವರ ಮನೆಹಾನಿಗಳಿಗೆ ತಲಾ ರೂ.95,100 ಗಳ ಚೆಕ್‌ನ್ನು ಮಡಿಕೇರಿ ತಾಲ್ಲೂಕಿನ ತಹಶೀಲ್ದಾರ್ ಪಿ.ಎಸ್.ಮಹೇಶ್ ಅವರ ಉಪಸ್ಥಿತಿಯಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಶುಕ್ರವಾರ ಶಾಸಕರ ಕಚೇರಿಯಲ್ಲಿ ವಿತರಿಸಿದರು.