ರುಚಿಯಾದ ಬೀಟ್‏ ರೂಟ್ ಹಲ್ವಾ ಮಾಡುವ ವಿಧಾನ

26/08/2022

ಬೇಕಾಗುವ ಪದಾರ್ಥಗಳು :  ಬೀಟ್‏ರೂಟ್ -2, ಹಾಲು -1 ಕಪ್,  ಸಕ್ಕರೆ – 1/2 ಕಪ್, ತುಪ್ಪ- 2 ಚಮಚ, ಖೋಯಾ- 100 ಗ್ರಾಂ,  ಹಸಿರು ಏಲಕ್ಕಿ-1 ಚಮಚ, ಗೋಡಂಬಿ- 6,  (ಒಡೆದದ್ದು) ಒಣದ್ರಾಕ್ಷಿ – 8,  ತುಪ್ಪ- 2 ಚಮಚ, ಬಾದಾಮ್ ಸ್ವಲ್ಪ

ಮಾಡುವ ವಿಧಾನ : ಬೀಟ್‏ರೂಟ್ ತುರಿ ಮತ್ತು ಗೋಡಂಬಿ , ಬಾದಾಮ್ ಮತ್ತು ಒಣದ್ರಾಕ್ಷಿಗಳನ್ನು ತುಪ್ಪದಲ್ಲಿ ಫ್ರೈ ಮಾಡಿ. ಅದೇ ಪ್ಯಾನ್ ನಲ್ಲಿ ತುರಿದ ಬೀಟ್‏ರೂಟ್ ಸೇರಿಸಿ ಮತ್ತು ಸುಮಾರು ಐದು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಹುರಿಯಿರಿ. ಈಗ ಅದಕ್ಕೆ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಾಣಲೆಯನ್ನು ಮುಚ್ಚಿ ಮತ್ತು ಸುಮಾರು 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಲು ಬಿಡಿ.
ನಡುನಡುವೆ ಪ್ಯಾನ್ ನಲ್ಲಿ ಮಿಶ್ರಣವನ್ನು ಕದಡುತ್ತಿರಿ. ಬೀಟ್‏ರೂಟ್ ತುರಿ ಬಹುತೇಕ ಹಾಲಿನಲ್ಲಿ ನೆನೆಸಿದ ನಂತರ, ಅದಕ್ಕೆ ಸಕ್ಕರೆ ಸೇರಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.
ಇದಕ್ಕೆ ಖೋಯಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಏಲಕ್ಕಿ ಪುಡಿಯನ್ನು ಸೇರಿಸಿ, ಮಿಶ್ರಣ ಮಾಡಿ ಮತ್ತು ಸ್ಟವ್ ನಿಂದ ಕೆಳಗಿಳಿಸಿ. ಈಗ ರುಚಿಯಾದ ಬೀಟ್‏ರೂಟ್ ಹಲ್ವಾ ತಿನ್ನಲು ಸಿದ್ಧ.