ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದಲ್ಲಿ ಮಾತೆ ಮರಿಯಮ್ಮ ಜಯಂತಿ ಮಹೋತ್ಸವ

08/09/2022

ವಿರಾಜಪೇಟೆ ಸೆ.8 : ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದಲ್ಲಿ ಮಾತೆ ಮರಿಯಮ್ಮ ಅವರ ಜಯಂತಿ ಮಹೋತ್ಸವವನ್ನು ವೈಭವದಿಂದ ಆಚರಿಸಲಾಯಿತು. ಜಯಂತಿ ಅಂಗವಾಗಿ 9 ದಿನಗಳ ಕಾಲ ಭಕ್ತಾದಿಗಳು ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಿದರು. ಇಂದು ಮಳೆಯನ್ನು ಲೆಕ್ಕಿಸದೆ ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಮಾತೆ ಮರಿಯಮ್ಮನವರಿಗೆ ಪುಷ್ಪ ನಮನ ಅರ್ಪಿಸುವುದರೊಂದಿಗೆ ಭಕ್ತಿ ಭಾವ ಮೆರೆದರು. ಸಂತ ಅನ್ನಮ್ಮ ದೇವಾಲಯದ ಧರ್ಮ ಗುರುಗಳಾದ ದಯಾನಂದ ಪ್ರಭು, ಐಜಾಕ್ ರತ್ನಕರ, ಏಸು ಪ್ರಸಾದ್, ಕುಶಾಲನಗರ ತಪವನ ದೇವಾಲಯದ ಜಾನ್ ಲೋಬೊ, ಸದಸ್ಯರುಗಳು ಹಾಗೂ ಭಕ್ತರು ಉಪಸ್ಥಿತರಿದ್ದರು. ಹಬ್ಬದ ಪ್ರಯುಕ್ತ ಅನ್ನ ಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.