ಸಕಲ ಗೌರವಗಳೊಂದಿಗೆ ನೆರವೇರಿದ ರಾಣಿ 2ನೇ ಎಲಿಜಬೆತ್ ಅಂತ್ಯಕ್ರಿಯೆ

20/09/2022

ಲಂಡನ್: ರಾಜಮನೆತನ, ರಾಣಿಯರು, ಜಾಗತಿಕ ಮಟ್ಟದ ನಾಯಕರ ಅಂತಿಮ ನಮನಗಳೊಂದಿಗೆ ಬ್ರಿಟನ್ ನ ದೀರ್ಘಾವಧಿ ಆಳಿದ ರಾಣಿ 2 ನೇ ಎಲಿಜಬೆತ್ ಅವರ ಅಂತ್ಯಕ್ರಿಯೆ ಸಕಲ ಗೌರವಗಳೊಂದಿಗೆ ನಡೆಯಿತು.

ವೆಸ್ಟ್ ಮಿನಿಸ್ಟರ್ ಅಬ್ಬೇಯಲ್ಲಿ ಅಂತ್ಯಕ್ರಿಯೆಗೂ ಮುನ್ನ, ಅಗಲಿದ ರಾಣಿಗೆ ಗೌರವಾರ್ಥ ಇಡೀ ಬ್ರಿಟನ್ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿತು. ಬ್ರಿಟನ್ ರಾಣಿಯ ಅಂತ್ಯಕ್ರಿಯೆಯನ್ನು ಸ್ಕ್ರೀನ್ ಗಳಲ್ಲಿ ಪ್ರಸಾರ ಮಾಡಲಾಗಿತ್ತು. ಜಾಗತಿಕ ಮಟ್ಟದಲ್ಲಿ ಹಲವು ಮಂದಿ ವೀಕ್ಷಿಸಿದರು.