ರುಚಿಕರವಾದ ಪೈನಾಪಲ್ ಹಲ್ವಾ ಮಾಡುವ ವಿಧಾನ

20/09/2022

ಬೇಕಾಗುವ ಪದಾರ್ಥಗಳು : ಪೈನಾಪಲ್- 1, ಕಾರ್ನ್ ಫ್ಲೋರ್ – 1 ಬಟ್ಟಲು, ಸಕ್ಕರೆ- 2 ಬಟ್ಟಲು, ದ್ರಾಕ್ಷಿ- ಸ್ವಲ್ಪ, ಗೋಡಂಬಿ- ಸ್ವಲ್ಪ, ಬಾದಾಮಿ- ಸ್ವಲ್ಪ, ಕೇಸರಿ ದಳ ಅಥವಾ ಫುಡ್ ಕಲರ್ – ಸ್ವಲ್ಪ, ತುಪ್ಪ- 1, ಬಟ್ಟಲು, ಏಲಕ್ಕಿ ಪುಡಿ- ಸ್ವಲ್ಪ

ಮಾಡುವ ವಿಧಾನ : ಪೈನಾಪಲ್  ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿಕೊಳ್ಳಿ. ನಂತರ ಮಿಕ್ಸಿ ಜಾರ್’ಗೆ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಪೈನಾಪಲ್ ನ್ನು ಉಂಡೆಗಳಿಲ್ಲದಂತೆ ಸೋಸಿಕೊಳ್ಳಿ.
ನಂತರ ಇದಕ್ಕೆ ಕಾರ್ನ್ ಫ್ಲೋರ್ ಹಾಕಿ ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿಕೊಳ್ಳಿ. ಬಳಿಕ ಒಂದು ಬಟ್ಟಲು ನೀರು ಹಾಕಿ ಮಿಶ್ರಣ ಮಾಡಿ.
ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸಕ್ಕರೆ ಹಾಗೂ ಒಂದು ಸಣ್ಣಬಟ್ಟಲು ನೀರು ಹಾಕಿ ಸಕ್ಕರೆ ಕರಗಲು ಬಿಡಿ. ನಂತರ ಒಂದು ನಿಮಿಷ ಕುದಿಸಿಕೊಂಡು ಪೈನಾಪಲ್-ಕಾರ್ನ್ ಫ್ಲೋರ್ ಮಿಶ್ರಣವನ್ನು ಹಾಕಿ ಸಣ್ಣ ಉರಿಯಲ್ಲಿಟ್ಟು ಸ್ಫೂನ್ ನಲ್ಲಿ ಕೈಯಾಡಿಸುತ್ತಲೇ ಇರಿ. ಮಿಶ್ರಣ ಗಟ್ಟಿಯಾದ ಬಳಿಕ ಇದಕ್ಕೆ ಕೇಸರಿ ದಳ ಅಥವಾ ಫುಡ್ ಕಲರ್, ಏಲಕ್ಕಿ ಪುಡಿ ಹಾಕಿ ಕಲಸಿಕೊಳ್ಳಿ. ನಿಧಾನಗತಿಯಲ್ಲಿ ತುಪ್ಪವನ್ನು ಸ್ವಲ್ಪ, ಸ್ವಲ್ಪವೇ ಹಾಕಿ ಮಿಶ್ರಣ ಮಾಡಿಕೊಳ್ಳಿ.
ಕೊನೆಯಲ್ಲಿ ಸಣ್ಣಗೆ ಕತ್ತರಿಸಿಕೊಂಡ ದ್ರಾಕ್ಷಿ, ಗೋಡಂಬಿ ಹಾಗೂ ಬಾದಾಮಿ ಚೂರುಗಳನ್ನು ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಪೈನಾಪಲ್ ಹಲ್ವಾ ಸವಿಯಲು ಸಿದ್ಧ.