ಐತಿಹಾಸಿಕ ಮಹತ್ವ ಹೊಂದಿರುವ ಸ್ಥಳ ಶ್ರೀರಂಗಪಟ್ಟಣ

20/09/2022

ಶ್ರೀರಂಗಪಟ್ಟಣ, ಕರ್ನಾಟಕದ ಮಂಡ್ಯ ಜಿಲ್ಲೆಯ ಒಂದು ಪ್ರಮುಖ ಐತಿಹಾಸಿಕ, ಸಾಂಸ್ಕೃತಿಕ ಹಾಗು ಧಾರ್ಮಿಕ ಮಹತ್ವ ಹೊಂದಿರುವ ಪಟ್ಟಣವಾಗಿದೆ.

ಶ್ರೀರಂಗನಾಥ ಸ್ವಾಮಿ ದೇವಾಲಯವು ಪಟ್ಟಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈ ದೇವಾಲಯವು ಗಂಗ ಅರಸರು ಕಾಲದ್ದೆಂದು ಪ್ರತೀತಿಯಿದೆ. ಇದನ್ನು 12ನೇ ಶತಮಾನದಲ್ಲಿ ಜೀರ್ಣೋದ್ಧಾರ ಮಾಡಲಾಯಿತು.

ಕಾವೇರಿ ನದಿ ಕವಲೊಡೆಯುವ ಸ್ಥಳಗಳಲ್ಲೆಲ್ಲ ಶ್ರೀರಂಗನಾಥ ಸ್ವಾಮಿಯ ದೇವಾಲಯಗಳಿರುವುದು ಒಂದು ವಿಶೇಷ.

ಇವುಗಳೆಂದರೆ: ಆದಿ ರಂಗ – ಶ್ರೀರಂಗಪಟ್ಟಣ
ಮಧ್ಯ ರಂಗ – ಶಿವನಸಮುದ್ರ
ಅಂತ್ಯ ರಂಗ – ತಮಿಳುನಾಡಿನ ಶ್ರೀರಂಗಂ

ಪಶ್ಚಿಮ ವಾಹಿನಿಯು ಹಿಂದುಗಳಿಗೆ ಅಂತಿಮ ಕರ್ಮಗಳನ್ನು ಮಾಡಲು ಒಂದು ಪುಣ್ಯ ಕ್ಷೇತ್ರ. ಇಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಮೃತರ ಅಸ್ಥಿಗಳನ್ನು ವಿಸರ್ಜಿಸಿದರೆ ಮೋಕ್ಷ ಲಭಿಸುವುದೆಂದು ನಂಬಿಕೆಯಿದೆ.

ಐತಿಹಾಸಿಕ ಮಹತ್ವ : ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಶ್ರೀರಂಗಪಟ್ಟಣ ಐತಿಹಾಸಿಕ ಮಹತ್ವವುಳ್ಳ ಊರಾಗಿದೆ. ಶ್ರೀರಂಗಪಟ್ಟಣ ಮೈಸೂರು ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅದು ಯದು ವಂಶದ ಯದುರಾಯರ ಕಾಲದಿಂದಲೂ ಟಿಪ್ಪು ಸುಲ್ತಾನ್ ನ ತನಕವೂ ಮುಂದುವರೆದಿತ್ತು.ನಂತರ ಅದು ಹತ್ತಿರದ ದವಳಗಿರಿಗೆ ಸ್ಥಳಾಂತರವಯಿತು.

ಪ್ರಾಮುಖ್ಯತೆ : ಶ್ರೀರಂಗಪಟ್ಟಣವು ತನ್ನ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ಈ ಊರು ಇಲ್ಲಿ 9ನೇ ಶತಮಾನದಲ್ಲಿ ನಿರ್ಮಾಣವಾದ ರಂಗನಾಥಸ್ವಾಮಿ ದೇವಾಲಯದಿಂದಾಗಿ ಶ್ರೀರಂಗಪಟ್ಟಣ ಎಂಬ ಹೆಸರು ಪಡೆದಿದೆ. ಈ ದೇವಾಲಯವು ಹಲವಾರು ವರ್ಷಗಳಿಂದ ವಿವಿಧ ಬಗೆಯ ಸಿಂಗಾರಗಳನ್ನು ಕಾಣುತ್ತಾ ಬೆಳೆದಿದೆ. ಅದರ ಫಲವಾಗಿ ಈಗ ಈ ದೇವಾಲಯವು ಹೊಯ್ಸಳ ಮತ್ತು ವಿಜಯನಗರ ಶೈಲಿಯ ಸಂಯುಕ್ತ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿ ನಿಂತಿದೆ.

ಈ ಊರು ಮೈಸೂರಿನ ರಾಜಧಾನಿಯಾದಾಗ ತನ್ನ ಪ್ರಾಮುಖ್ಯತೆಯನ್ನು ಗಳಿಸಿತು.ಇಲ್ಲಿನ ದೇವಾಲಯಗಳು,ದರಿಯಾ ಡೌಲಾತು ಆ ಕಾಲದಲ್ಲೇ ನಿರ್ಮಾಣಗೊಂಡವು.

ಶ್ರೀರಂಗಪಟ್ಟಣವು ಬೆರಗುಗೊಳಿಸುವ ಸುಂದರ ತಾಣಗಳನ್ನು ಹೊಂದಿದೆ. ಭಾರತದ ಎರಡನೆ ಅತಿದೊಡ್ಡ ಜಲಪಾತವೆಂದು ಪರಿಗಣಿಸಲ್ಪಟಿರುವ ಶಿವನಸಮುದ್ರ ಜಲಪಾತದಂತಹ ಪ್ರಸಿದ್ಧ ವಿಹಾರ ತಾಣಗಳು ಇಲ್ಲಿವೆ.

ಶ್ರೀರಂಗಪಟ್ಟಣದ ಸಂಗಮ – ಇಲ್ಲಿ ಉತ್ತರ ಕಾವೇರಿ, ದಕ್ಷಿಣ ಕಾವೇರಿ ಮತ್ತು ಲೋಕಪಾವನಿ ನದಿಗಳು ಕೂಡುವ ಸಂಗಮವಿದ್ದು ನೋಡಲು ಯೋಗ್ಯವಾದ ಸ್ಥಳವಾಗಿದೆ.

ಶ್ರೀರಂಗಪಟ್ಟಣವು ಬೆಂಗಳೂರಿನಿಂದ 127 ಕಿ.ಮೀ ಮತ್ತು ಮೈಸೂರಿನಿಂದ 13 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಊರು ತನ್ನದೆ ಆದ ರೈಲುನಿಲ್ದಾಣವನ್ನುಹೊಂದಿದೆ. ಮೈಸೂರು ಇಲ್ಲಿಗೆ ಸಮೀಪದ ವಿಮಾನನಿಲ್ದಾಣವಾಗಿದೆ. ರಸ್ತೆಯಮೂಲಕವು ಶ್ರೀರಂಗಪಟ್ಟಣಕ್ಕೆ ಸುಲಭವಾಗಿ ತಲುಪಬಹುದು. ಈ ದ್ವೀಪವು ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ನೆಲೆಸಿದೆ.

ಶ್ರೀರಂಗಪಟ್ಟಣದಲ್ಲಿ ನೋಡುವ ಸ್ಥಳಗಳು :: ಗುಂಬಜ್ ಕೃಷ್ಣ ರಾಜ ಸಾಗರ ಬಲಮುರಿ ಎಡಮುರಿ ಸಂಗಮ್ ಗೋಸಾಯ್ ಘಾಟ್ ಧ್ವನಿ ಬೆಳಕು ಕಾರ್ಯಕ್ರಮ ಸ್ನಾನ ಘಟ್ಟ ಚಾಮರಾಜೇಂದ್ರ ವಸ್ತು ಸಂಗ್ರಹಾಲಯ ಕಾವೇರಿನದಿ ಮಹದೇವಪುರ

ಶ್ರೀರಂಗನಾಥ ಸ್ವಾಮಿ ದೇವಾಲಯ
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ(ಜುಮ್ಮ ಮಸೀದಿ)
ದರಿಯಾ ದೌಲತ್
ರಂಗನತಿಟ್ಟು ಪಕ್ಷಿಧಾಮ
ಶ್ರೀ ನಿಮಿಷಾಂಬ ದೇವಾಲಯ
ಬೆಳಗೊಳ ಹತ್ತಿರದ ಶ್ರೀನಿವಾಸ ಕ್ಷೇತ್ರದ ಲಕ್ಷ್ಮೀ ನರಸಿoಹಸ್ವಾಮಿ ದೇವಾಲಯ
ಕರಿಘಟ್ಟದಲ್ಲಿರುವ ಶ್ರೀ ವೆಂಕಟೇಶ್ವರ ದೇವಾಲಯ
ಮೇಳಪುರದ ಯಜ್ಞೆಶ್ವರ ದೇವಾಲಯ
ಬೆಳಗೊಳ ಹತ್ತಿರದ ಶ್ರೀನಿವಾಸ ಕ್ಷೇತ್ರದ ಭo ಭo ಆಶ್ರಮ
ಚoದ್ರವನ ಆಶ್ರಮ
ಬನ್ನಹಳ್ಳಿ ಶ್ರೀ ತಿರುಮಲ ದೇವರು