ಕಬ್ಬಿನ ಕಾಡು : ಮನೆಯಂಗಳಕ್ಕೆ ಬಿದ್ದ ಕಾರು

20/09/2022

ನಾಪೋಕ್ಲು ಸೆ.20 : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆಯ ಪಕ್ಕದ ಬರೆಯಿಂದ ಮನೆಯಂಗಳಕ್ಕೆ ಉರುಳಿ ಬಿದ್ದ ಘಟನೆ ಕಕ್ಕಬ್ಬೆ ಸಮೀಪದ ಕಬ್ಬಿನ ಕಾಡು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
 ಕೊಳಕೇರಿ ಗ್ರಾಮದ ನಿವಾಸಿಯೊಬ್ಬರು ಕಕ್ಕಬ್ಬೆ ಮಾರ್ಗವಾಗಿ ಮಾರುತಿ ವೇಗನರ್ ಕಾರಿನಲ್ಲಿ ವಿರಾಜಪೇಟೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅಪಘಾತದಲ್ಲಿ ಕಾರು ಜಖಂಗೊಂಡಿದ್ದು, ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ( ವರದಿ : ಝಕರಿಯ ನಾಪೋಕ್ಲು )