ಹಸುಗಳ ಕಳ್ಳತನ : ಐವರ ಬಂಧನ

22/09/2022

ಮಡಿಕೇರಿ ಸೆ.22 : ಕಡಗದಾಳು ಗ್ರಾಮದಲ್ಲಿ ಹಸುಗಳನ್ನು ಕಳ್ಳತನ ಮಾಡಿದ ಆರೋಪದಡಿ ಐವರು ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪೊನ್ನತ್‌ಮೊಟ್ಟೆಯ ಹುಸೇನ್ (45), ಹಮೀದ್ (40), ಕೊಂಡoಗೇರಿಯ ಸಲೀಂ (31), ಕಡಗದಾಳುವಿನ ಚಂಗಪ್ಪ (40) ಹಾಗೂ ಅಭ್ಯತ್ ಮಂಗಲದ ಶ್ರೀಧರ (60) ಬಂಧಿತ ಆರೋಪಿಗಳಾಗಿದ್ದಾರೆ.
ಹಸುಗಳ ಕಳವು ಪ್ರಕರಣಕ್ಕೆ ಸಂಬoಧಿಸಿದoತೆ ದಿನು ಸೋಮಣ್ಣ ಹಾಗೂ ಮಂದಣ್ಣ ಎಂಬುವವರು ದೂರು ನೀಡಿದ್ದರು. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಕೂಡ ಕಡಗದಾಳುವಿನಲ್ಲಿ ಪ್ರತಿಭಟನೆ ನಡೆಸಿತ್ತು.