ಕುಶಾಲನಗರದಲ್ಲಿ ಗಮನ ಸೆಳೆದ ಪೌರಕಾರ್ಮಿಕರ ಕ್ರೀಡಾಕೂಟ

22/09/2022

ಕುಶಾಲನಗರ, ಸೆ.22: ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಿಗೆ ಕ್ರೀಡಾ ಸ್ಪರ್ಧೆ ನಡೆಯಿತು.
ಕುಶಾಲನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆದ ಕ್ರೀಡಾ ಸ್ಪರ್ಧೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಉಪಾಧ್ಯಕ್ಷೆ ಸುರಯ್ಯ ಭಾನು ಚಾಲನೆ ನೀಡಿದರು.
ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧಾ ಕಾರ್ಯಕ್ರಮಗಳು ಜರುಗಿದವು.ಸೀನಿಯರ್ ಮತ್ತುಜೂನಿಯರ್ ತಂಡಗಳಾಗಿ 2 ತಂಡಗಳ ನಡುವೆ ಕ್ರಿಕೆಟ್, ಭಾರದಗುಂಡು ಎಸೆತ, ಮ್ಯೂಸಿಕಲ್ ಚೇರ್, ರಂಗೋಲಿ ಸ್ಪರ್ಧೆ ಮತ್ತಿತರ ಕ್ರೀಡೆಗಳು ನಡೆದವು.
ಇದೇ ಸಂದರ್ಭ ಜೀವಿತ ಪ್ರಯೋಗಾಲಯದ ವತಿಯಿಂದ ಎಲ್ಲಾ ಪೌರಕಾರ್ಮಿಕರಿಗೆ ಉಚಿತ ರಕ್ತ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಆರೋಗ್ಯಾಧಿಕಾರಿ ಉದಯ್ ಕುಮಾರ್ ಮತ್ತಿತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಇದ್ದರು.
ಪೌರಕಾರ್ಮಿಕರ ಸಂಘದ ಎಸ್.ಆರ್‍ಗಣೇಶ್, ಗೌರವಾಧ್ಯಕ್ಷರಾದ ಮೋಹನ್‍ಕುಮಾರ್, ಕಾರ್ಯದರ್ಶಿ ನಂಜುಂಡ ಮತ್ತಿತರರು ಇದ್ದರು.
ದಿನಾಚರಣೆ ಅಂಗವಾಗಿ ಸೆ.23 ರಂದು ಕುಶಾಲನಗರ ಎಪಿಸಿಎಂಎಸ್ ಸಭಾಂಗಣದಲ್ಲಿ ಸಭಾಕಾರ್ಯಕ್ರಮ ಬೆಳಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ.