ನಾಪೋಕ್ಲು ಚೇಂಬರ್ ಆಫ್ ಕಾಮರ್ಸ್ ನಿಂದ ಅಪ್ಪಚ್ಚ ಕವಿ  ಜನ್ಮದಿನಾಚರಣೆ

22/09/2022

ನಾಪೋಕ್ಲು : ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಕೊಡಗಿನ ಆದಿಕವಿ ಅಪ್ಪನೆರವಂಡ ಹರದಾಸ ಅಪ್ಪಚ್ಚ ಕವಿಯವರ   ಜನ್ಮದಿನವನ್ನು ಬುಧವಾರ ಆಚರಿಸಲಾಯಿತು. ನಾಪೋಕ್ಲು ಬೇತು ರಸ್ತೆಗೆ ಅಳವಡಿಸಲಾದ ಹರದಾಸ ಅಪ್ಪಚ್ಚಕವಿ ಅವರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಸಾರ್ವಜನಿಕರಿಗೆ ಸಿಹಿ ಹಂಚುವುದರ ಮೂಲಕ ಅವರ ಜನ್ಮ ದಿನವನ್ನು ಆಚರಿಸಲಾಯಿತು.
 ಈ ಸಂದರ್ಭ ನಾಪೋಕ್ಲು ಚೇಂಬರ್ ಆಫ್ ಕಾಮರ್ಸ್ ಸಂಚಾಲಕರಾದ ಮಾಚೆಟ್ಟೀರ ಪಿ. ಕುಶಾಲಪ್ಪ, ಶಮ ಮೆಡಿಕಲ್ಸ್ ಮಾಲೀಕರಾದ ಎಂ. ಎ. ಮನ್ಸೂರ್ ಆಲಿ, ಕಾವೇರಿ ಬಾರ್ ಮಾಲೀಕರಾದ ಅಪ್ಪಚಟ್ಟೋಳಂಡ ನವೀನ್,  ಗ್ರಾಮ ಪಂಚಾಯಿತಿ ಸದಸ್ಯ  ಸಾಬಾ ತಿಮ್ಮಯ್ಯ, ಮಾಜಿ ಸೈನಿಕರಾದ ಕೊಂಡೀರ ನಂದ, ಮತ್ತಿತರರು ಹಾಜರಿದ್ದರು. (ವರದಿ : ಝಕರಿಯ ನಾಪೋಕ್ಲು)