ಸೀಬೆ ಹಣ್ಣಿನ ಉಪಯೋಗಗಳು

11/10/2022

ಪೇರಳೆಯಲ್ಲಿ ಕ್ಯಾಲರಿಯು ತುಂಬಾ ಕಡಿಮೆ ಪ್ರಮಾಣದಲ್ಲಿದೆ ಮತ್ತು ನೂರು ಗ್ರಾಂ ಪೇರಳೆಯಲ್ಲಿ 68 ಕ್ಯಾಲರಿ ಮಾತ್ರ ಇದೆ.
ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ಹೊಟ್ಟೆಯು ದೀರ್ಘಕಾಲ ತುಂಬಿರುವಂತೆ ಮಾಡುವುದು ಹಾಗೂ ಪದೇ ಪದೇ ತಿನ್ನುವುದನ್ನು ಕಡಿಮೆ ಮಾಡುವುದು.
ಬೊಜ್ಜು ಉಂಟು ಮಾಡಲು ಪ್ರಮುಖ ಕಾರಣವಾಗಿರುವ ಅತಿಯಾಗಿ ತಿನ್ನುವುದನ್ನು ಇದು ತಡೆಯುವುದು.
ಚಯಾಪಚಯವನ್ನು ಇದು ನಿಯಂತ್ರಿಸುವುದು ಹಾಗೂ ದೇಹವು ಪರಿಣಾಮಕಾರಿ ಆಗಿ ಕ್ಯಾಲರಿ ದಹಿಸಲು ಸಹಕಾರಿ.
ಹೆಚ್ಚು ಕ್ಯಾಲರಿ ದೇಹಕ್ಕೆ ಸೇರಿಸದೆ, ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಪೇರಳೆ ಹಣ್ಣಿನಿಂದಾಗಿ ಸಿಗುವುದು.

ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಇದು ಮಧುಮೇಹವನ್ನು ನಿಯಂತ್ರಿಸುವುದು.
ಇದು ರಕ್ತದಲ್ಲಿ ಸಕ್ಕರೆ ಅಂಶವನ್ನು ತುಂಬಾ ನಿಧಾನವಾಗಿ ಬಿಡುಗಡೆ ಮಾಡುವುದು. ಇದರಿಂದ ಬೇಗನೆ ಸಕ್ಕರೆ ಮಟ್ಟವು ಏರುವುದು ತಪ್ಪುವುದು.
ಆಹಾರದಲ್ಲಿನ ನಾರಿನಾಂಶವು ರಕ್ತನಾಳದಲ್ಲಿ ಹೀರಿಕೊಳ್ಳುವಂತಹ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಡುವುದು ಹಾಗೂ ಮಧುಮೇಹವನ್ನು ನಿರ್ವಹಿಸಲು ಸಹಕಾರಿ.
ಮಿತ ಪ್ರಮಾಣದಲ್ಲಿ ಪೇರಳೆ ಸೇವನೆ ಮಾಡಿ. ಅತಿಯಾಗಿ ಸೇವನೆ ಮಾಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ತೀರ ಕೆಳಮಟ್ಟಕ್ಕೆ ಇಳಿಯಬಹುದು. ಅತಿಯಾಗಿ ತಿಂದರೆ ಅದರಿಂದ ಅನಿಯಮಿತ ಎದೆಬಡಿತ, ವೇಗವಾದ ಹೃದಬಡಿತ, ನಿಶ್ಯಕ್ತಿ, ಪೇಲವ ಚರ್ಮ, ಆತಂಕ, ಬೆವರು, ಹಸಿವು ಉಂಟಾಗಬಹುದು.

ಪೇರಳೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ, ವಿಟಮಿನ್ ಎ ಮತ್ತು ಫ್ಲಾವನಾಯ್ಡ್ ಗಳಿದ್ದು, ಇದು ಕಣ್ಣುಗಳನ್ನು ಫ್ರೀ ರ್ಯಾಡಿಕಲ್ ನಿಂದ ರಕ್ಷಣೆ ಮಾಡುವುದು.

ವಯಸ್ಸಾಗುವ ವೇಳೆ ಕಾಡುವ ಅಕ್ಷಿಪಟಲದ ಅವನತಿ, ಕ್ಯಾಟರ್ಯಾಕ್ಟ್, ಗ್ಲುಕೋಮಾವನ್ನು ತಡೆಯುವುದು.

ಕಣ್ಣಿನ ಆರೋಗ್ಯಕ್ಕೆ ಮುಖ್ಯವಾಗಿ ವಿಟಮಿನ್ ಎ ಅಗತ್ಯವಾಗಿ ಬೇಕು. ಇದು ಕಣ್ಣುಗಳು ಒಣಗುವುದನ್ನು ತಡೆಯುವುದು ಮತ್ತು ಇರುಳುಗಣ್ಣಿನ ಅಪಾಯವನ್ನು ದೂರವಿಡುವುದು.

ವಿಟಮಿನ್ ಎ, ವಿಟಮಿನ್ ಸಿ ಮತ್ತು ಇತರ ಕೆಲವೊಂದು ಪೈಥೋನ್ಯೂಟ್ರಿಯೆಂಟ್ಸ್, ಪಾಲಿಫೆನಾಲ್ ಮತ್ತು ಫ್ಲಾವನಾಯ್ಡ್ ಅಂಶಗಳು ಫ್ರೀ ರ್ಯಾಡಿಕಲ್ ನಿಂದಾಗಿ ಅಂಗಾಂಶಗಳಿಗೆ ಆಗುವ ಹಾನಿ ತಪ್ಪಿಸುವುದು.
ಅಂಗಾಂಶಗಳನ್ನು ಫ್ರೀ ರ್ಯಾಡಿಕಲ್ ನಿಂದ ರಕ್ಷಿಸುವ ಪೇರಳೆ ಹಣ್ಣು ವಿವಿಧ ರೀತಿಯ ಕ್ಯಾನ್ಸರ್ ನಿಂದ ರಕ್ಷಣೆ ನೀಡುವುದು. ಮುಖ್ಯವಾಗಿ ಕರುಳು, ಗುದ, ಹೊಟ್ಟೆ ಇತ್ಯಾದಿ ಕ್ಯಾನ್ಸರ್ ಬರದಂತೆ ತಡೆಯುವುದು.
ಪೇರಳೆ ಹಣ್ಣಿನಲ್ಲಿ ಇರುವ ಲೈಕೋಪೆನೆ ಎನ್ನುವ ಅಂಶವು ಕ್ಯಾನ್ಸರ್ ಕಾರಕ ಅಂಗಾಂಶಗಳು ಬೆಳವಣಿಗೆ ಆಗದಂತೆ ತಡೆಯುವುದು.

ಸೀಬೆ ಮರದ ಎಲೆಗಳಲ್ಲಿ ಮುಖದ ಮೇಲಿನ ಕೆಂಪು ಮತ್ತು ಕಪ್ಪು ಕಲೆಗಳು ಹೋಗುತ್ತವೆ ಎಂದು ಹೇಳುತ್ತಾರೆ. ಏಕೆಂದರೆ ಇವುಗಳಲ್ಲಿ ಚರ್ಮದ ಕಲೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಗುಣವಿದೆ.
ಉರಿಯೂತವನ್ನು ನಿವಾರಣೆ ಮಾಡಿ ತ್ವಚೆಗೆ ಉತ್ತಮ ಟೋನಿಂಗ್ ಏಜೆಂಟ್ ಆಗಿ ಸೀಬೆ ಮರದ ಎಲೆ ಕೆಲಸ ಮಾಡುತ್ತದೆ. ನಿಮ್ಮ ಕೋಮಲ ತ್ವಚೆಯ ಬಣ್ಣವನ್ನು ತಿಳಿಯಾಗಿಸುವ ಗುಣಲಕ್ಷಣ ಇದರಲ್ಲಿದೆ.

ಸೀಬೆ ಮರದ ಎಲೆಗಳಲ್ಲಿ ಮುಖದ ಮೇಲಿನ ಕೆಂಪು ಮತ್ತು ಕಪ್ಪು ಕಲೆಗಳು ಹೋಗುತ್ತವೆ ಎಂದು ಹೇಳುತ್ತಾರೆ. ಏಕೆಂದರೆ ಇವುಗಳಲ್ಲಿ ಚರ್ಮದ ಕಲೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಗುಣವಿದೆ.
ಉರಿಯೂತವನ್ನು ನಿವಾರಣೆ ಮಾಡಿ ತ್ವಚೆಗೆ ಉತ್ತಮ ಟೋನಿಂಗ್ ಏಜೆಂಟ್ ಆಗಿ ಸೀಬೆ ಮರದ ಎಲೆ ಕೆಲಸ ಮಾಡುತ್ತದೆ. ನಿಮ್ಮ ಕೋಮಲ ತ್ವಚೆಯ ಬಣ್ಣವನ್ನು ತಿಳಿಯಾಗಿಸುವ ಗುಣಲಕ್ಷಣ ಇದರಲ್ಲಿದೆ.