ಕೊಡವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ

26/11/2022

ಮಡಿಕೇರಿ ನ.26 : ಕ್ರೀಡೆಯಲ್ಲಿ ಭಾಗವಹಿಸುವುದು ಮಾತ್ರವಲ್ಲ ಅದಕ್ಕೆ ಪೂರಕವಾದ ಪೋತ್ಸಾಹದ ಅಗತ್ಯವೂ ಇದೆ ಎಂದು ಕರ್ನಾಟಕ ಹೈಕೋರ್ಟ್ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ.
ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ “ಕೊಡವ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್” ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊಡಗಿನ ಆಚಾರ, ವಿಚಾರ, ಸಂಸ್ಕೃತಿಯೊAದಿಗೆ ಕ್ರೀಡೆ ಕೂಡ ಒಂದು ಭಾಗವಾಗಿದ್ದು, ವಿವಿಧ ಕ್ರೀಡೆಗಳಲ್ಲಿ ಜಿಲ್ಲೆಯ ಕ್ರೀಡಾಪುಟಗಳು ದೇಶ ವಿದೇಶಗಳಲ್ಲಿ ಸಾಧನೆ ಮಾಡುವ ಮೂಲಕ ಕೀರ್ತಿ ತಂದಿದ್ದಾರೆ. ಕ್ರೀಡಾ ಸಾಧನೆ ಕೊಡಗನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಮುಂದಿನ ಯುವ ಪೀಳಿಗೆಗೆ ಇದೇ ನಮ್ಮ ಸಂಸ್ಕೃತಿ ಎಂದು ಅರಿವು ಮೂಡಿಸಲು ಕ್ರೀಡೆಯೂ ಒಂದು ಮಾರ್ಗವಾಗಿದೆ ಎಂದರು.
ಕೊಡಗಿನಲ್ಲಿ ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸುತ್ತಿರುವುದು ಹೆಮ್ಮೆಯ ವಿಚಾರ ಎಂದ ಪೊನ್ನಣ್ಣ, ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು, ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ರನ್‌ಜಿಟ್ ಟೆಕ್ನಾಲಜೀಸ್ ಪ್ರೈ.ಲಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ನಂದಿನಿ ಎ.ತಿಮ್ಮಯ್ಯ, ಅಂತರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಹಾಗೂ ಟೀಮ್ ಕೈಮಡ 2025 ತಂಡದ ಪ್ರಮುಖರಾದ ಕಡೆಮಾಡ ಕನಸು ದೇವಯ್ಯ, ಕಡೆಮಾಡ ರಿತೇಶ್, ಬೆಂಗಳೂರು ಬಂಬಂಗ ತಂಡದ ಪ್ರಮುಖರಾದ ಅವರೆಮಾಡಂಡ ಶರಣ್, ಕರಿನೆರವಂಡ ವಿಲಾಸ್, ಕೊಡವ ಬೀರಂಗ ತಂಡದ ಪ್ರಮುಖರಾದ ಪಾಸೂರ ಕಿಶೋರ್, ಚೆಟ್ಟಿಯಂಡ ನಿರನ್, ಎಲ್‌ಸಿಎಂ ಟಸ್ಕರ್ಸ್ @97 ತಂಡದ ಪ್ರಮುಖರಾದ ಚೆಂದಂಡ ರೋಷನ್, ಕಲ್ಯಾಟಂಡ ಸುಜಯ್, ಕೆಎ12 ವಾರಿಯರ್ಸ್ ತಂಡದ ಪ್ರಮುಖರಾದ ನಂದೆಟಿರ ಜೋಯಪ್ಪ, ಅಂಜಿಕೇರಿ ನಾಡ್‌ಕೂಟ ತಂಡದ ಪ್ರಮುಖರಾದ ತಿತಿರ ರೋಷನ್, ಚೆಕ್ಕೆರ ಆದಶ್, ಟೀಮ್ ಭಗವತಿ ತಂಡದ ಪ್ರಮುಖರಾದ ಬಲ್ಲರಂಡ ಸಜನ್, ಮಾಳೇಟಿರ ನವೀನ್, ಎಂಪಿಬಿ ರಾಯಲ್ಸ್ ತಂಡದ ತಂಬುಕುತ್ತಿರ ಅರುಣ್, ತಂಬುಕುತ್ತಿರ ರಾಣಿ, ಪಿ & ಜಿ ನಾಲ್ನಾಡ್ ನರಿಯ ತಂಡದ ಪ್ರಮುಖರಾದ ಬಾಳೆಯಡ ಪ್ರತೀಶ್, ಅಚ್ಚೆಯಡ ಗಗನ್, ಮೈಸೂರು ಮಕ್ಕ ತಂಡದ ಪ್ರಮುಖರಾದ ಪುದಿಯೊಕ್ಕಡ ಪ್ರವೀಣ್, ಉಳ್ಳಂಗಡ ಸಿಮ್ಮು ಕುಟ್ಟಪ್ಪ ಉಪಸ್ಥಿತರಿದ್ದರು.
ಪಂದ್ಯಾವಳಿಯಲ್ಲಿ ಒಟ್ಟು ಹತ್ತು ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಲಿವೆ.
::: ಸಮಾರೋಪ :::
ನ.27 ರಂದು ಸಂಜೆ 4.30 ಗಂಟೆಗೆ ಕುಟ್ಟಂಡ ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಕಾಂಗ್ರೆಸ್ ಯುವ ಮುಖಂಡ ಡಾ.ಮಂಥರ್ ಗೌಡ, ರನ್‌ಜಿಟ್ ಟೆಕ್ನಾಲಜೀಸ್ ಪ್ರೈ.ಲಿ ನ ನಂದಿರ ಬಿ.ತಿಮ್ಮಯ್ಯ, ನಟಿ ಉದ್ದಪಂಡ ಹರ್ಷಿಕಾ ಪೂಣಚ್ಚ, ನಟ ಭುವನ್ ಪೊನ್ನಣ್ಣ, ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ವೇದಿಕೆ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಮಧ್ಯಾಹ್ನ 3.30ಕ್ಕೆ WE TRIBES WITH POSITIVE VIBES ಲೇಲುಳ್ಳಿ..ಲೇ..ಲೇ” ಆಲ್ಬಮ್ ಸಾಂಗ್ ಬಿಡುಗಡೆಯಾಗಲಿದ್ದು, ಸಂಜೆ 6.30 ಗಂಟೆಗೆ ಲೈವು ಡಿಜೆ ಕಾರ್ಯಕ್ರಮ ನಡೆಯಲಿದೆ.