ವಿರಾಜಪೇಟೆ : ಸಂತ ಅನ್ನಮ್ಮ ಪದವಿ ಕಾಲೇಜಿನಲ್ಲಿ ಏಡ್ಸ್ ಕುರಿತು ಅರಿವು ಕಾರ್ಯಕ್ರಮ

03/12/2022

ವಿರಾಜಪೇಟೆ ಡಿ.3 : ಮುನ್ನೆಚ್ಚರಿಕೆ ಇದ್ದಲ್ಲಿ ಏಡ್ಸ್ ತಡೆಗಟ್ಟಲು ಸಾಧ್ಯ ಎಂದು ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ರಶ್ಮಿ ಶೆಟ್ಟಿ ಅಭಿಪ್ರಾಯಪಟ್ಟರು.
ಸಂತ ಅನ್ನಮ್ಮ ಪದವಿ ಕಾಲೇಜಿನ ವತಿಯಿಂದ ನಡೆಸಲಾದ ಏಡ್ಸ್ ದಿನಾಚರಣೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಏಡ್ಸ್ ಅನ್ನುವುದು ಮಾರಕ ಖಾಯಿಲೆ ಎಂಬುದಾಗಿ ಜನರಲ್ಲಿ ಭಯವನ್ನು ಹುಟ್ಟಿಸುವುದಕಿಂತ ಅದರ ಅರಿವು ಮೂಡಿಸುವ ಕಾರ್ಯವಾಗಬೇಕು, ಆ ಮೂಲಕ ಆರೋಗ್ಯ ಜಾಗೃತಿ ಸಾಧ್ಯ ಎಂದರು.
ಕಾಲೇಜಿನ ರಾ. ಸೆ. ಯೋ. ಅಧಿಕಾರಿ ಅರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಅರಿತಿರಬೇಕು. ಸ್ವಚ್ಛ ಪರಿಸರವನ್ನು ನಿರ್ಮಿಸಬೇಕು. ಆರೋಗ್ಯವಂತ ಯುವ ಜನತೆಯಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.
ಏಡ್ಸ್ ಬಗ್ಗೆ ಇರುವ ತಿಳುವಳಿಕೆ ಅದನ್ನು ತಡೆಗಟ್ಟಲು ಸಹಕಾರಿ ಎಂದರು.