ಉಡೋತ್‍ಮೊಟ್ಟೆಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಪರಿವಾರ ದೈವಗಳ ನೇಮೋತ್ಸವ

07/12/2022

ಮಡಿಕೇರಿ ಡಿ.7 : ಹೆರವನಾಡು ಗ್ರಾಮದ ಉಡೋತ್‍ಮೊಟ್ಟೆಯಲ್ಲಿರುವ ಶ್ರೀ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ವರ್ಷಾವಧಿ ನೇಮೋತ್ಸವ ಹಾಗೂ ಪರಿವಾರ ಸತ್ಯ ದೈವಗಳ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.

ಮುಂಜಾನೆ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿತು. ಸಂಜೆ ದೈವಗಳ ಭಂಡಾರ ಇಳಿಸಲಾಯಿತು.

ರಾತ್ರಿಯಿಂದ ಮರುದಿನದ ವರೆಗೆ ಶ್ರೀ ಮಂತ್ರವಾದಿ ಗುಳಿಗ, ಶ್ರೀ ಕಲ್ಲುರ್ಟಿ ದೈವ, ಶ್ರೀ ಧರ್ಮ ದೈವ ಹಾಗೂ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮ ನಡೆಯಿತು.

ನೇಮೋತ್ಸವದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ತೀರ್ಥ ಪ್ರಸಾದವನ್ನು ಸ್ವೀಕರಿಸಿದರು. ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.