ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ -2022

14/12/2022

ಮಡಿಕೇರಿ ಡಿ.14 :  (ಲೇಖನ: ಟಿ.ಜಿ.ಪ್ರೇಮಕುಮಾರ್ ) ಶಕ್ತಿ / ಇಂಧನ ಬಳಕೆ ನಮ್ಮ ದಿನನಿತ್ಯದ ಜೀವನ ಕ್ರಮವಾಗಿದೆ. ಇಂಧನದ ಕೊರತೆ ಮತ್ತು ಜಾಗತಿಕ ಪರಿಸರ ವ್ಯವಸ್ಥೆಗಳ ಸಮರ್ಥನೀಯಯನ್ನು ಮೇಲಿನ ಅದರ ಪರಿಣಾಮದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಪ್ರತಿ ವರ್ಷ ಡಿ.14  ರಂದು (ಇಂದು) ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ.
ನಾವು ನಮ್ಮ ಪರಿಸರವನ್ನು ಮಾಲಿನ್ಯದಿಂದ ರಕ್ಷಿಸಲೇಬೇಕಿದೆ. ಪರಿಸರ ಸಂರಕ್ಷಣೆಯೇ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ನಾವು ಕೊಡಬಹುದಾದ ಅತ್ಯಮೂಲ್ಯ ಕೊಡುಗೆಯಾಗಿದೆ. ಹಾಗಾಗಿ, ನಾವು ಮಾಲಿನ್ಯ ತಡೆಯಲು ಪರಿಸರ ಸ್ನೇಹಿ ಹಸಿರು ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ.
ಶಕ್ತಿಯ ಬಳಕೆ ಮತ್ತು ನಮ್ಮ ದಿನನಿತ್ಯದ ಜೀವನದಲ್ಲಿ ಅದರ ಬಳಕೆ, ಅದರ ಕೊರತೆ ಮತ್ತು ಜಾಗತಿಕ ಪರಿಸರ ವ್ಯವಸ್ಥೆಗಳ ಸುಸ್ಥಿರತೆಯ ಮೇಲೆ ಅದರ ಪ್ರಭಾವದ ಮಹತ್ವವನ್ನು ಎತ್ತಿ ಹಿಡಿಯಲು ಜಾಗತಿಕವಾಗಿ ಡಿಸೆಂಬರ್ 14 ರಂದು ವಿಶ್ವ ಇಂಧನ ಸಂರಕ್ಷಣಾ ದಿನವನ್ನು ಆಚರಿಸುವುದಿಲ್ಲ . ಶಕ್ತಿಗೆ ಪ್ರಸ್ತುತ ಮಾನವಕುಲದ ಭವಿಷ್ಯವನ್ನು ಎದುರಿಸುತ್ತಿರುವ ಮಹತ್ವದ ಸಮಸ್ಯೆಗಳ ಮೇಲೆ ಇದು ನಮ್ಮ ಗಮನವನ್ನು ಕೇಂದ್ರೀಕರಿಸುತ್ತದೆ. ಈ ದಿನವು ಒಳಗೊಂಡಿರುವ ಸಮಸ್ಯೆಗಳ ಬಗ್ಗೆ ತುರ್ತು ವಿಷಯವನ್ನು ಉಚ್ಚರಿಸಲು ಸಹಾಯ ಮಾಡುತ್ತದೆ.
ಇಂದು ನಾವು ಭವಿಷ್ಯತ್ತಿನ ದೃಷ್ಟಿಯಿಂದ ಶಕ್ತಿ/ ಇಂಧನ, ಪರಿಸರ ಸಂರಕ್ಷಣೆ ಮಾಡುವುದು ಅಗತ್ಯ.
ಇಂಧನಗಳ ಸಂರಕ್ಷಣೆ ಮಾಡುವುದರಿಂದ ದೇಶದ ಅಭಿವೃದ್ಧಿ ಸಾಧ್ಯ. ಇಂತಹ ಕೆಲಸಕ್ಕೆ ಯುವಕರು ಮುಂದಾಗಬೇಕು. ಕಡಿಮೆ ಇಂಧನಗಳನ್ನು ಬಳಸುವುದರಿಂದ ಪರಿಸರದಲ್ಲಿ ಉಂಟಾಗುವ ಮಾಲಿನ್ಯ ಕಡಿಮೆ ಮಾಡಬಹುದು”
ನಾವು ಚಿಕ್ಕವರಿದ್ದಾಗ ಹಿಂದಿನ ದಿನಗಳಲ್ಲಿ ಇಂಧನಗಳ ಬಳಕೆ ಮತ್ತು ಅವುಗಳ ಮಹತ್ವದ ಬಗ್ಗೆ ಅರಿವಿರಲಿಲ್ಲ. ಆಗ ಇಷ್ಟೊಂದು ಪ್ರಮಾಣದಲ್ಲಿ ಇಂಧನ ಸಿಗುತ್ತಿರಲಿಲ್ಲ. ಇಂದು ಇಂದಿನ ಪೀಳಿಗೆಗೆ ಒಳ್ಳೆಯ ಯೋಜನೆ ಸಿಕ್ಕಿದೆ. ಸೋಲಾರ್‌, ನೀರು, ಗಾಳಿ ಎಲ್ಲ ಶಕ್ತಿಗಳೂ ದೊರಕಿವೆ. ಅವುಗಳನ್ನು ಮಿತವಾಗಿ ಬಳಸಬೇಕು. ಮಿತವಾಗಿ ಬಳಸಿದಲ್ಲಿ ಮುಂದಿನ ಪೀಳಿಗೆಗೂ ಇಂಧನ ಮೂಲಗಳನ್ನು ಉಳಿಸಬಹುದು.
ನಾವು ಉತ್ತಮ ಭವಿಷ್ಯತ್ತಿಗಾಗಿ
ಇಂಧನವನ್ನು ಉಳಿಸಿಕೊಳ್ಳಬೇಕು. ಗಾಳಿ, ಸೋಲಾರ್‌ ಶಕ್ತಿಗಳನ್ನು ಸದುಪಯೋಗಪಡಿಸಿಕೊಳ್ಳಬೇಕು”.
ಇಂಧನ ಸಂರಕ್ಷಣೆ: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ (ಕೆ.ಆರ್.ಇ.ಡಿ.ಎಲ್) ಸಂಸ್ಥೆಯು ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಇದರ ಮೂಲಕ ಸೌರಶಕ್ತಿ, ಪವನ ಶಕ್ತಿ ಉತ್ಪಾದನೆಯೊಂದಿಗೆ ವಿದ್ಯುಚ್ಛಕ್ತಿಯನ್ನು ಭವಿಷ್ಯತ್ತಿಗಾಗಿ ಸಂರಕ್ಷಿಸಲು ಹಲವು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಪರಿಸರ ಮಾಲಿನ್ಯ :  ಮನುಷ್ಯನ ಅತೀ ಆಸೆ, ಏರುತ್ತಿರುವ ಜನಸಂಖ್ಯೆ, ವೈಭವೋಪೇತ ಜೀವನದ ಬಯಕೆಗಳು ಪರಿಸರವನ್ನು ಹಾಳುಮಾಡುತ್ತಿವೆ.
ವಿದ್ಯುಚ್ಛಕ್ತಿಯನ್ನು ಮಿತವ್ಯಯಗೊಳಿಸಿ, ವೆಚ್ಚವನ್ನು ಕಡಿತಗೊಳಿಸಿ. ಇಂದಿನ ಸಂದರ್ಭದ ಭಾರತದಲ್ಲಿ ಕಡಿಮೆಯೆಂದರೂ ಶೇ.80ರಷ್ಟು ಶಕ್ತಿಯು ಪೋಲಾಗುತ್ತಿದೆ.‌
ನಾವು ಇಂಧನ/ ಶಕ್ತಿಯನ್ನು ಅದು ಉತ್ಪಾದನೆಗೊಳ್ಳುವುದಕ್ಕಿಂತ ಹೆಚ್ಚು ವೇಗವಾಗಿ ಖರ್ಚು ಮಾಡುತ್ತೇವೆ.
ಪರಿಸರವನ್ನು ಮಲಿನ್ಯರಹಿತಗೊಳಿಸುವುದು ಹಿಂದೆಂದಿಗಿಂತ ಇಂದು ಅತ್ಯಗತ್ಯವಾಗಿದೆ.
ಭಾರತ ದೇಶವು ವಿದೇಶಗಳಿಗೆ ಗರಿಷ್ಠ ಪ್ರಮಾಣದಲ್ಲಿ ತೈಲ ಉತ್ಪನ್ನಗಳಿಗೆ ಅವಲಂಬಿತವಾಗಿದೆ. ಈ ತೈಲ ಉತ್ಪನ್ನಗಳೆಂದರೆ ಪೆಟ್ರೋಲ್‌, ಡೀಸೆಲ್‌ಗಾಗಿ ಪ್ರತಿವರ್ಷ ಲಕ್ಷಾಂತರ ಕೋಟಿ ರೂ.ಗಳನ್ನು
ಭಾರತ ವ್ಯಯಿಸುತ್ತಿದೆ. ಇದರ ಜೊತೆಗೆ ಈ ತೈಲಗಳ ಬೆಲೆ ಏರುತ್ತಲೇ ಇದೆ. ಇವುಗಳಿಂದ ನಮ್ಮ ಪರಿಸರಕ್ಕೂ ಹಾನಿ ತಪ್ಪಿದ್ದಲ್ಲ. ಆದ್ದರಿಂದ, ನಾವು ಇಂಧನವನ್ನು ಮಿತವಾಗಿ ಬಳಸಬೇಕು.ಇಂಧನವನ್ನು ಮಿತವಾಗಿ ಬಳಸಿದರೆ, ಜನರ ಮತ್ತು ದೇಶದ ಹಣ ಕೂಡ ಉಳಿಯುತ್ತದೆ ಮತ್ತು ಇದರಿಂದ ಪರಿಸರ ಸಂರಕ್ಷಣೆಯೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಇಂಧನ ಉಳಿಸಲು ಹಲವಾರು ಸುಧಾರಣಾ ಕ್ರಿ ಗಳನ್ನು ಅನುಸರಿಸಬೇಕು. ಆ ಕ್ರಮಗಳನ್ನೆಲ್ಲಾ ಚಾಚು ತಪ್ಪದೇ ಬಳಸಿದರೆ ಇಂಧನ ಕ್ಷಮತೆ ಮತ್ತು ದಕ್ಷತೆ ಕೂಡ ಹೆಚ್ಚುತ್ತದೆ. ಇದರಿಂದ ಪರಿಸರದಲ್ಲಿ ಮಾಲಿನ್ಯ ತಡೆಗಟ್ಟಬಹುದು.
ಹಸಿರು ಶಕ್ತಿ ಬಳಸಿ, ಹಣವ ದಿನವು ಉಳಿಸಿ’, ‘ಸೌರಶಕ್ತಿ ಬಳಕೆ, ಬಾಳಿನಲ್ಲಿ ಉಳಿಕೆ’, ‘ಹಸಿರುಶಕ್ತಿ ಬಳಸಿರಿ, ಶಕ್ತಿ ಕೊರತೆ ಅಳಿಸಿರಿ’, ‘ಬಿಸಿಲ ಹಿಡಿವ ತಂತ್ರ, ಸೌರಬಳಕೆ ಮಂತ್ರ’, ‘ಇಂಧನ ಉಳಿತಾಯ, ದೇಶದ ಆದಾಯ’, ‘ಸೌರಶಕ್ತಿ ಅರಿವು ಬೆಳೆಸುವ, ಭೂಮಾತೆಯ ಜೀವ ಉಳಿಸುವ’, ‘ಅವಶ್ಯವಿದ್ದರೆ ದೀಪ ಉರಿಸಿ, ಉಳಿತಾಯದ ಆನಂದವ ಹರಿಸಿ’, ‘ಇಂಧನ ಉಳಿತಾಯಕ್ಕೆ ನೀಡಿ ಒತ್ತು, ಪರಿಸರಕ್ಕೆ ಬಾರದು ಎಂದಿಗೂ ಕುತ್ತು’ ಎಂಬಿತ್ಯಾದಿ ಘೋಷವಾಕ್ಯಗಳೊಂದಿಗೆ ಇಂಧನ ಸಂರಕ್ಷಣೆ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಿದೆ.
ಶಕ್ತಿ ಸಂರಕ್ಷಣೆ : ನಾವು ಶಕ್ತಿಯನ್ನು ಅದು ಉತ್ಪಾದನೆಗೊಳ್ಳುವುದಕ್ಕಿಂತ ಹೆಚ್ಚು ವೇಗವಾಗಿ ಖರ್ಚು ಮಾಡುತ್ತೇವೆ.
ಪರಿಸರ ಮಾಲಿನ್ಯ : ಮನುಷ್ಯನ ಅತೀ ಆಸೆ, ಏರುತ್ತಿರುವ ಜನಸಂಖ್ಯೆ, ವೈಭವೋಪೇತ ಜೀವನದ ಬಯಕೆಗಳು ಪರಿಸರವನ್ನು ಹಾಳುಮಾಡುತ್ತಿವೆ. ನಾವು ನಮ್ಮ‌ ಮನೆ ಮತ್ತು ಸಮುದಾಯದಲ್ಲಿ
ವಿದ್ಯುಚ್ಛಕ್ತಿಯನ್ನು ಮಿತವ್ಯಯಗೊಳಿಸಿ, ವೆಚ್ಚವನ್ನು ಕಡಿತಗೊಳಿಸಬೇಕಿದೆ. ಇಂದಿನ ಸಂದರ್ಭದ ಭಾರತದಲ್ಲಿ ಕಡಿಮೆಯೆಂದರೂ ಶೇ.70ರಷ್ಟು ಶಕ್ತಿಯು ಪೋಲಾಗುತ್ತಿದೆ. ಪರಿಸರವನ್ನು ಮಲಿನ್ಯರಹಿತಗೊಳಿಸುವುದು ಹಿಂದೆಂದಿಗಿಂತ ಇಂದು ಅತ್ಯಗತ್ಯವಾಗಿದೆ.

ಪರಿಸರವನ್ನು ಮಲಿನ್ಯರಹಿತಗೊಳಿಸುವುದು ಹಿಂದೆಂದಿಗಿಂತ ಇಂದು ಅತ್ಯಗತ್ಯವಾಗಿದೆ.
ನಾವು ಶಕ್ತಿಯನ್ನು ಅದು ಉತ್ಪಾದನೆಗೊಳ್ಳುವುದಕ್ಕಿಂತ ಹೆಚ್ಚು ವೇಗವಾಗಿ ಖರ್ಚು ಮಾಡುತ್ತೇವೆ.
ಆದ್ದರಿಂದ, ನಾವು ಭವಿಷ್ಯತ್ತಿಗಾಗಿ ಶಕ್ತಿ/ ಇಂಧನವನ್ನು ಸಂರಕ್ಷಿಸಲು ಪಣ ತೊಡಬೇಕಿದೆ.

ಲೇಖನ:
ಟಿ.ಜಿ.ಪ್ರೇಮಕುಮಾರ್,
ಮುಖ್ಯೋಪಾಧ್ಯಾಯರು,
ಸರ್ಕಾರಿ ಪ್ರೌಢಶಾಲೆ,
ಕೂಡುಮಂಗಳೂರು,
ಕೊಡಗು ಜಿಲ್ಲೆ.
(ಮೊ: 9448588352)