Saturday, December 14, 2019 11:10 AM

ಸದಾಕಾಲವೂ ದುಮ್ಮಿಕ್ಕುವ ಮಾಧವನೂರಿನ ಜಲಪಾತಗಳು
148
ಸದಾಕಾಲವೂ ದುಮ್ಮಿಕ್ಕುವ ಮಾಧವನೂರಿನ ಜಲಪಾತಗಳು

ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಸದಾಕಾಲವೂ ದುಮ್ಮಿಕ್ಕುವ ಹಲವಾರು ಜಲಪಾತಗಳಿವೆ. ಇವುಗಳಲ್ಲಿ ಕೆಲವು ಫಾಲ್ಸ್‌ಗಳು ಅಪರಿಚಿತವಾಗಿಯೇ ಉಳಿದುಕೊಂಡಿದೆ. ಕೂಡ್ಲು ತೀರ್ಥ ಉಡುಪಿ ಜಿಲ್ಲೆಯ ಹೆಬ್ರಿಯಿಂದ ಸೋಮೇಶ್ವರಕ್ಕೆ ತೆರಳುವಾಗ 2 ಕಿ.ಮೀ. ಮೊದಲು ಸೀತಾನದಿ ಡೈವರ್ಶನ್ ಸಿಗುತ್ತದೆ. ಅಲ್ಲಿಂದ 5 ಕಿ.ಮೀ. ಮಣ್ಣಿನ ರಸ್ತೆ ಇದೆ. ಎರಡೂವರೆ ಕಿ.ಮೀ. ದೂರದವರೆಗೆ ಮಣ್ಣಿನ ದಾರಿಯಲ್ಲಿ ವಾಹನದಲ್ಲಿ ಬಂದು ಮೇಗದ್ದೆಗೆ ಬರಬೇಕು. ಇಲ್ಲಿಂದ ಇನ್ನು ಎರಡೂವರೆ ಕಿ.ಮೀ. ಬಲಕ್ಕೆ ಬಂದರೆ ಕೂಡ್ಲುತೀರ್ಥ ಅಥವಾ ಸೀತಾನದಿ ಜಲಪಾತ ಕಾಣಸಿಗುತ್ತದೆ. 160 ಫೀಟ್ ಎತ್ತರದಿಂದ ಸುತ್ತ ಕಲ್ಲಿನ ಆವರಣದ ನಡುವಿನಿಂದ ಯಾವ ಅಡೆತಡೆಯೂ ಇಲ್ಲದೆ ನೇರವಾಗಿ ಧುಮ್ಮಿಕ್ಕುವ ಜಲಧಾರೆಯನ್ನು ನೋಡುವುದೇ ವಿಸ್ಮಯ. ಇಲ್ಲೇ ಮೇಗದ್ದೆಯಿಂದ ಎಡಭಾಗಕ್ಕೆ ಬಂದರೆ ಬಣಂಜಾರು ಎನ್ನುವ ಜನವಸತಿ ಪ್ರದೇಶವಿದೆ. ಅಲ್ಲಿಂದ 6 ಕಿ.ಮೀ. ಅರಣ್ಯದ ನಡುವೆ ನಡೆದು ಬಂದರೆ ಬರ್ಕಣ ಎಂಬ ಜಲಪಾತವೂ ಕಾಣುತ್ತದೆ. ಇಲ್ಲಿ ಗೈಡ್‌ನ್ನು ಅವಶ್ಯವಾಗಿ ಅವಲಂಬಿಸಲೇಬೇಕು. ಹಲವಾರು ಕಿರು ದಾರಿಗಳು ಅವರಷ್ಟಕ್ಕೇ ಬರುವ ಚಾರಣಿಗರನ್ನು, ಪರಿಸರಪ್ರಿಯರನ್ನು ಹಾದಿ ತಪ್ಪಿಸುತ್ತವೆ. ಸಾಕಷ್ಟು ಅಪಾಯಕಾರಿ ಕಂದಕಗಳೂ ಇಲ್ಲಿವೆ. ಜಲಪಾತದ ಬುಡದಲ್ಲಿ ನಿಂತು 180 ಫೀಟ್ ಎತ್ತರದಿಂದ ಮೂರು ಪದರಗಳಾಗಿ ಬೀಳುವ ಜಲಪಾತವನ್ನು ಆಸ್ವಾದಿಸಬಹುದು. ಆಗುಂಬೆ ಘಾಟಿಯಿಂದ ಮೇಲೆ ಬಂದು ವ್ಯೆವ್ ಪಾಯಿಂಟ್‌ನಲ್ಲಿ ನಿಂತು ದೂರದಿಂದ ಈ ಜಲಪಾತದ ದೃಶ್ಯವನ್ನು ಸವಿಯಬಹುದು. ಶೃಂಗೇರಿ, ಕಿಗ್ಗದಿಂದ ನರಸಿಂಗ ಬೆಟ್ಟದಿಂದ ಕೆಳಗೆ ಇಳಿದರೂ ಈ ಜಲಪಾತದ ಚೆಲುವನ್ನು ಅನುಭವಿಸಬಹುದು. ಅತ್ಯಂತ ಕಷ್ಟದ ಹಾದಿ ಇದು. ಜೇನುಗೂಡುಗಳಂತೂ ಇಲ್ಲಿ ತುಂಬಿಕೊಂಡಿವೆ. ಹೆಬ್ರಿ, ಮಣಿಪಾಲ ಹಾಗೂ ಆಗುಂಬೆಯಲ್ಲಿ ವಸತಿ ವ್ಯವಸ್ಥೆ ಇದೆ. 

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್