Sunday, August 18, 2019 8:09 AM

ಮಹೇಶ್‌ ಗೌಡ ನಿರ್ದೇಶನದ 'ಮಹಿರ’
47
ಮಹೇಶ್‌ ಗೌಡ ನಿರ್ದೇಶನದ 'ಮಹಿರ’

ತನ್ನ ಶೀರ್ಷಿಕೆ ಮತ್ತು ಪೋಸ್ಟರ್‌ ಮೂಲಕ ಚಿತ್ರಪ್ರೇಮಿಗಳ ಗಮನ ಸೆಳೆದಿದ್ದ “ಮಹಿರ’ ಚಿತ್ರ  ಬಿಡುಗಡೆಯಾಗಿದೆ.

“ಮಹಿರ’ ಅನ್ನೋದು ಸಂಸ್ಕೃತದಲ್ಲಿ ಹೆಣ್ಣಿನ ಶಕ್ತಿಯ ಬಗ್ಗೆ ಹೇಳುವ ಪದವಾಗಿದ್ದು, ಈ ಚಿತ್ರದ ಕಥೆಯೂ ಹೆಣ್ಣಿನ ಶಕ್ತಿ ಮತ್ತು ಹೋರಾಟದ ಬಗ್ಗೆಯೇ ಹೇಳುತ್ತಿರುವುದರಿಂದ ಚಿತ್ರದ ಕಥೆಗೆ ಸೂಕ್ತ ಎಂಬ ಕಾರಣಕ್ಕೆ “ಮಹಿರ’ ಪದವನ್ನೇ ಚಿತ್ರದ ಶೀರ್ಷಿಕೆಯಾಗಿ ಬಳಸಿಕೊಂಡಿದೆ.

ತಾಯಿ-ಮಗಳ ಬದುಕು ಮತ್ತು ಹೋರಾಟದ ಕಥೆಯನ್ನು “ಮಹಿರ’ ಚಿತ್ರ ತೆರೆದಿಡಲಿದೆ. ಚಿತ್ರದಲ್ಲಿ ವರ್ಜೀನಿಯ ರಾಡ್ರಿಗಸ್‌ ಹಾಗೂ ಚೈತ್ರ ಆಚಾರ್‌ ತಾಯಿ-ಮಗಳ ಪಾತ್ರದಲ್ಲಿ ಕಾಣಿಸಿಕೊಂಡರೆ, ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್‌ ಬಿ. ಶೆಟ್ಟಿ ಮೊದಲ ಬಾರಿಗೆ ಈ ಚಿತ್ರದಲ್ಲಿ ತನಿಖಾಧಿಕಾರಿಯಾಗಿ ರಫ್ ಆ್ಯಂಡ್‌ ಟಫ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಹೇಶ್‌ ಗೌಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್