Tuesday, December 10, 2019 7:24 AM

ಜೀವನದ ಏರಿಳಿತ ’ಜರ್ಕ್’ ರಾಜ್ಯಾದ್ಯಂತ ಬಿಡುಗಡೆ
169
ಜೀವನದ ಏರಿಳಿತ ’ಜರ್ಕ್’ ರಾಜ್ಯಾದ್ಯಂತ ಬಿಡುಗಡೆ

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಹೊರಟಾಗ, ಎದುರಾಗುವ ಅಡೆತಡೆಗಳು ಹಲವು. ಅವು ಮನಸ್ಸಿನಲ್ಲಿ ನಕಾರತ್ಮಕ ಭಾವನೆಯನ್ನು ಮೂಡಿಸುತ್ತವೆ. ಅಂದುಕೊಂಡ ಗುರಿ ಎಡೆಗೆ ಸಾಗದಂತೆ ಮಾಡುತ್ತವೆ. ಆಗ ಜೀವನದಲ್ಲಿ ಒಂದು ರೀತಿಯ ಎಳೆತ ಕಾಡುತ್ತದೆ. ಅದನ್ನೇ ಇಂಗ್ಲೀಷ್‌ನಲ್ಲಿ ’ಜರ್ಕ್’ ಎಂದು ಕರೆಯಲಾಗುತ್ತದೆ.
ಈಗ ಇದೇ ಅಂಶವನ್ನು ಹೊತ್ತು ಸ್ಯಾಂಡಲ್‌ವುಡ್‌ನಲ್ಲಿ ’ಜರ್ಕ್’ ಎಂಬ ಚಿತ್ರ ತೆರೆಗೆ ಬಂದಿದೆ. ನಮ್ಮನ್ನು ಎಡೆಬಿಡದೆ ಕಾಡುವ ವಿಚಾರಗಳನ್ನು ಆಧರಿಸಿ ನಿರ್ದೇಶಕ ಮಹಾಂತೇಶ್ ಮದಕರಿ, ಈ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತಂದಿದ್ದಾರೆ.
’ಜರ್ಕ್’ ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ನ್ಯಾಚುರಲ್ ಸ್ಟಾರ್ ಗಡ್ಡಪ್ಪ ಚಿತ್ರದಲ್ಲಿ ಅಭಿನಯಿಸಿರುವುದು. ಅದೂ ದ್ವಿಪಾತ್ರದಲ್ಲಿ ಅನ್ನುವುದು ಮತ್ತೊಂದು ವಿಶೇಷ. ಚಿತ್ರದಲ್ಲಿ ಮಜಾಟಾಕೀಸ್ ಖ್ಯಾತಿಯ ಪವನ್ ಕುಮಾರ್, ಕುರಿರಂಗ, ಹಿರಿಯ ನಟ ನರೇಂದ್ರದ ಬಾಬು ಬಹುಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ನೆಲೆಮನೆರಾಘವೇಂದ್ರ, ಪಾಲ್ಸ್‌ನಾಗ ಸಾಹಿತ್ಯದಲ್ಲಿ ಮೂಡಿಬಂದಿರುವ ಹಾಡುಗಳಿಗೆ ಎಡ್ವರ್ಡ್‌ಷಾ ಸಂಗೀತ ನೀಡಿದ್ದಾರೆ. ಬೀದರ್‌ನ ರವಿ.ಕೆ.ವಾಡೆದ್ ಮತ್ತು ಬಳ್ಳಾರಿಯ ನಾಗರತ್ನಕಂಪಾಲಿ ಜಂಟಿಯಾಗಿ ಬಂಡವಾಳ ಹೂಡಿದ್ದು, ಚಿತ್ರ ನಿರ್ಮಾಣದ ಜವಾಬ್ದಾರಿ ನಿರ್ವಹಿಸಿದ್ದಾರೆ. ಬೆಂಗಳೂರು, ದೇವರಾಯನದುರ್ಗ, ಕುಲುಮನಾಲಿಯಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್