Tuesday, December 10, 2019 8:21 AM

ನಂದನವನದೊಳ್ ಚಿತ್ರ ಪ್ರದರ್ಶನ ಮಾಡದ ಹಿನ್ನೆಲೆ ಸ್ಥಳೀಯ ಕಲಾವಿದರಿಂದ ಪ್ರತಿಭಟನೆ
185
ನಂದನವನದೊಳ್ ಚಿತ್ರ ಪ್ರದರ್ಶನ ಮಾಡದ ಹಿನ್ನೆಲೆ ಸ್ಥಳೀಯ ಕಲಾವಿದರಿಂದ ಪ್ರತಿಭಟನೆ

ಮಡಿಕೇರಿ ; ನಂದನವನದೊಳ್ ಚಿತ್ರ ಶುಕ್ರವಾರ ರಾಜ್ಯದಾದ್ಯಂತ ಪ್ರದರ್ಶನಗೊಳ್ಳುತ್ತಿದೆ. ಆದರೆ ಮಡಿಕೇರಿಯ ಕಾವೇರಿ ಚಿತ್ರ ಮಂದಿರದಲ್ಲಿ ಸಿನಿಮಾವನ್ನು ಪ್ರದರ್ಶಿಸದೆ   ಸ್ಥಳೀಯ ಕಲಾವಿದರಿಗೆ ದ್ರೋಹ ಮಾಡಿದ್ದಾರೆ ಎಂದು ಕಾವೇರಿ ಚಿತ್ರ ಮಂದಿರದ ಮುಂಭಾಗದಲ್ಲಿ ಚಿತ್ರದಲ್ಲಿ ನಟಿಸಿದ್ದ ಸ್ಥಳೀಯ ಕಲಾವಿದರು ಪ್ರತಿಭಟನೆ ನಡೆಸಿದರು.          ಮೈಸೂರು, ಬೆಂಗಳೂರು, ಕುಶಾಲನಗರ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.      ಈ ಸಂದರ್ಭ ಕಾವೇರಿ ಚಿತ್ರ ಮಂದಿರದ ವ್ಯವಸ್ಥಾಪಕರು ಪ್ರತಿಕ್ರಿಯಿಸಿ, ನಂದನವನದೊಳ್ ಚಿತ್ರ ಡೌನ್‌ಲೋಡ್ ಆಗಿಲ್ಲ. ಈ ಕಾರಣದಿಂದಾಗಿ ನಿಗದಿಯಂತೆ  ಪ್ರದರ್ಶನ ಮಾಡಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.        ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ನಂದನವನದೊ‌ಳ್ ಸಿನಿಮಾ ಕೊಡಗಿನಲ್ಲೇ ಚಿತ್ರೀಕರಣವಾಗಿದೆ. ಇದರಲ್ಲಿ ಕೊಡಗಿನ ಕಲಾವಿದರು ಕೂಡ ನಟನೆ ಮಾಡಿದ್ದಾರೆ. ಆದ್ದರಿಂದ ಕೂಡಲೇ ಸಿನಿಮಾ ಪ್ರದರ್ಶಿಸುವಂತೆ ಆಗ್ರಹಿಸಿದರು.    ಪ್ರತಿಭಟನೆಯಿಂದಾಗಿ ಶುಕ್ರವಾರ ಮಧ್ಯಾಹ್ನ ಎರಡು ಗಂಟೆಗೆ ನಂದನವನದೊಳ್ ಚಿತ್ರ  ಪ್ರದರ್ಶನ ಮಾಡಲಾಯಿತು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್