Monday, June 1, 2020 12:08 PM

ಕಿರಿಕೊಡ್ಲಿ ಮಠ ಶಾಲೆಯ ಮುಂಭಾಗದಲ್ಲಿ ಕೆರೆಯಾದ ರಸ್ತೆ
251
ಕಿರಿಕೊಡ್ಲಿ ಮಠ ಶಾಲೆಯ ಮುಂಭಾಗದಲ್ಲಿ ಕೆರೆಯಾದ ರಸ್ತೆ

ಮಡಿಕೇರಿ ಜು.೨೮ : ಕೊಡ್ಲಿಪೇಟೆ ಸಮೀಪದ ಊರುಗುತ್ತಿ ಗ್ರಾಮಕ್ಕೆ ತೆರಳುವ ರಸ್ತೆ ಕಿರಿಕೊಡ್ಲಿ ಮಠ ಶಾಲೆಯ ಮುಂಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಗಳ ಹೊಂಡಗಳಲ್ಲಿ ತುಂಬಿಕೊಂಡಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುವಂತೆ ಗ್ರಾಮಸ್ಥರು ಹಾಗೂ ಸಾರ್ವನಿಕರು ಒತ್ತಾಯಿಸಿದ್ದಾರೆ.
ಊರುಗುತ್ತಿ ಗ್ರಾಮಕ್ಕೆ ತೆರಳುವ ರಸ್ತೆಗಳ ಗುಂಡಿಗಳಲ್ಲಿ ಮಳೆ ನೀರು ನಿಂತು ಸಂಪೂರ್ಣ ಕೆಸರುಮಯವಾಗಿದ್ದು, ಶಾಲಾ ಮಕ್ಕಳು, ವಾಹನಗಳ ಸವಾರರು ಹಾಗೂ ಸಾರ್ವಜನಿಕರಿಗೆ ನಡೆದಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾವಾಗಿದೆ. ಇದರಿಂದ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಲೇ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಈ ರಸ್ತೆಯಲ್ಲಿ ಶಾಲಾ, ಕಾಲೇಜು ದೇವಸ್ಥಾನ, ಚರ್ಚ್‌ಗಳಿರುವುದರಿಂದ ಈ ಮಾರ್ಗವಾಗಿ ದಿನಂಪ್ರತಿ ಸಾವಿರಾರು ಮಂದಿ ನಡೆದಾಡುತ್ತಿದ್ದು, ವಾಹನಗಳ ಸಂಚಾರವು ಹೆಚ್ಚಾಗಿದೆ. ಈ ಗ್ರಾಮ ಪ್ರಸ್ತುತ ದಿನಗಳಲ್ಲಿ ಅಭಿವೃದ್ಧಿಯನ್ನು ಹೊಂದುತ್ತಿರುವ ಗ್ರಾಮವಾಗಿದೆ.
ಅಲ್ಲದೆ ಕೊಡ್ಲಿಪೇಟೆ ಗ್ರಾಮದ ಸುತ್ತ ಮುತ್ತಲಿಂದ ಹೆಚ್ಚಿನ ಶಾಲಾ ಕಾಲೇಜಿಗೆ ಮಕ್ಕಳು ನಡೆದು ಬರುವಂಥವರಾಗಿರುತ್ತಾರೆ ರಸ್ತೆ ಸಂಪೂರ್ಣ ಗುಂಡಿಯಿಂದ ಕೂಡಿದ್ದು, ಮಳೆ ಬಂದಾಗ ನೀರು ನಿಂತು ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಗೆ ಸಾರ್ವಜನಿಕರು ದೂರನ್ನು ಕೊಟ್ಟರು ಯಾವ ಪ್ರಯೋಜನ ಆಗಲಿಲ್ಲ. ಸಂಬಂಧ ಪಟ್ಟ ಇಲಾಖೆಯವರು ಜಾಣ ಕುರುಡು ಪ್ರದರ್ಶಿಸದೆ ರಸ್ತೆ ಅಭಿವೃದ್ಧಿಗೆ ಮುತುವರ್ಜಿ ವಹಿಸಬೇಕು ಎಂದು ಗ್ರಾಮಸ್ಥರು ಹಾಗೂ ಸರ್ವಾಜನಿಕರು ಒತ್ತಾಯಿಸಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್