Saturday, December 14, 2019 11:34 AM

ಸ್ವಾಭಾವಿಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ಉತ್ತರ ಕನ್ನಡದ ಅಪ್ಸರಕೊಂಡ ಜಲಪಾತ
161
ಸ್ವಾಭಾವಿಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ಉತ್ತರ ಕನ್ನಡದ ಅಪ್ಸರಕೊಂಡ ಜಲಪಾತ

ಉತ್ತರ ಕನ್ನಡದ ಕರಾವಳಿ ಸ್ವಾಭಾವಿಕ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಸಮುದ್ರದ ಸೊಬಗು, ಹಸಿರಿನಿಂದ ಕಂಗೊಳಿಸುತ್ತಿರುವ ಹೊನ್ನಾವರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹೊನ್ನಾವರದಿಂದ ರಾಷ್ಟ್ರೀಯ ಹೆದ್ದಾರಿ 17ರ ಮೂಲಕ ಸಾಗಿದರೆ ಕಾಸರಕೋಡ್ ಎಂಬ ಊರು ಸಿಗುತ್ತದೆ. ಅಲ್ಲಿ ಮನಸ್ಸೆಳೆಯುವ ಸಣ್ಣ ಜಲಪಾತವಿದೆ. ಪಕ್ಕದಲ್ಲೇ ಶರಾವತಿ ನದಿ ಹಾಗೂ ಅರಬ್ಬೀ ಸಮುದ್ರದ ಸಂಗಮವಿದೆ.

ಪುರಾಣ ಐತಿಹ್ಯದ ಪ್ರಕಾರ ಈ ಪ್ರದೇಶದಲ್ಲಿ ಅಪ್ಸರೆಯರು ವಾಸಿಸುತ್ತಿದ್ದರಂತೆ. ಹಾಗಾಗಿ ಈ ಜಲಪಾತಕ್ಕೆ ಅಪ್ಸರಕೊಂಡ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಅಪ್ಸರಕೊಂಡ ಜಲಪಾತ ಭಾರೀ ಎತ್ತರದಿಂದೇನು ಧುಮುಕುವುದಿಲ್ಲ. ಕೇವಲ 10ಮೀ ಎತ್ತರದ ಬೆಟ್ಟದಿಂದ ಇಳಿಯುತ್ತದೆ. ಈ ಬೆಟ್ಟದ ಮೇಲೆ ನಿಂತು ಸಮುದ್ರದ ವೈಭವ ಮತ್ತು ಸುಂದರ ಸೂರ್ಯಾಸ್ತವನ್ನು ನೋಡಬಹುದು. ಈ ಜಲಪಾತದ ಹತ್ತಿರದಲ್ಲೇ ಇರುವ ಅಪ್ಸರಕೊಂಡ ಸಮುದ್ರ ಮಾತ್ರ ರಮಣೀಯ. ಅಲ್ಲದೇ ಇಲ್ಲಿ ಸುಂದರ ಹೂತೋಟವಿದೆ. ಸ್ವಾಭಾವಿಕವಾಗಿ ನಿರ್ಮಾಣಗೊಂಡಿರುವ ಪಾಂಡವರ ಗುಹೆ ಎಂದು ಕರೆಯಲ್ಪಡುವ ಈ ಗುಹೆ ಇಲ್ಲಿನ ಪ್ರಮಖ ಆಕರ್ಷಣೆ.ಈ ಪ್ರದೇಶ ವಾಯುವಿಹಾರಕ್ಕೆ, ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ತಾಣ.

ಹಿತವಾಗಿ ಬೀಸುವ ತಂಗಾಳಿ, ಸಮುದ್ರದ ಭೋರ್ಗರೆತ ನೋಡುವುದು ಕಣ್ಣಿಗೆ ಹಬ್ಬ. ಭೇಟಿ ನೀಡಲು ಸೂಕ್ತ ಕಾಲ ಅಕ್ಟೋಬರ್‌ನಿಂದ ಫೆಬ್ರುವರಿ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್