Tuesday, December 10, 2019 7:20 AM

ಔಷಧೀಯ ಗುಣವುಳ್ಳ ಆಟಿ ಪಾಯಸ ಮಾಡುವ ವಿಧಾನ
181
ಔಷಧೀಯ ಗುಣವುಳ್ಳ ಆಟಿ ಪಾಯಸ ಮಾಡುವ ವಿಧಾನ

ಕಕ್ಕಡ ಎಂದರೇ ಆಟಿ ತಿಂಗಳು ಅಥವಾ ಕರ್ಕಾಟಕ ಮಾಸ ಎಂದು ಅರ್ಥ. ದಟ್ಟಾರಣ್ಯದಿಂದ ಕೂಡಿರುವ ಕೊಡಗಿನಲ್ಲಿ ಸಾಕಷ್ಟು ಔಷಧಿಯ ಗುಣಗಳುಳ್ಳ ಸಸ್ಯ ಪ್ರಭೇದಗಳಿವೆ. ಅವುಗಳಲ್ಲಿ ಆಟಿ ಸೊಪ್ಪು ಪ್ರಮುಖವಾದುದ್ದು. ವೈಜ್ಞಾನಿಕವಾಗಿ ಜಸ್ಟೀಸಿಯ ವೈನಾಡೆನ್ನಿಸ್ ಎಂದು ಕರೆಯುವ ಈ ಸಸ್ಯ ಜಿಲ್ಲೆಯ ಕಾಡುಗಳು ಮಾತ್ರವಲ್ಲದೇ ಕಾಫಿ ತೋಟದಲ್ಲೂ ಹೇರಳವಾಗಿ ಕಾಣಸಿಗುತ್ತದೆ. 

ಮೂರಡಿಯಷ್ಟು ಎತ್ತರ ಬೆಳೆಯುವ ಈ ಗಿಡಕ್ಕೆ ಆಟಿ ತಿಂಗಳ ಮೊದಲ ದಿನದಿಂದ ನಾನಾ ಔಷಧೀಯ ಗುಣಗಳು ಸೇರುತ್ತವೆ ಎಂಬ ನಂಬಿಕೆ ಇದೆ. 18ದಿನಗಳ ಕಾಲ ದಿನಕ್ಕೊಂದು ಔಷಧ ಗುಣ ಸೇರಿ 18ನೇ ದಿನ ಪರಿಮಳ ಬೀರುತ್ತದೆ. ಅಂದು ಆ ಗಿಡವನ್ನು ಬೇಯಿಸಿ ರಸ ತೆಗೆಯುತ್ತಾರೆ. ಕೆಂಬಣ್ಣದ ಈ ರಸದಲ್ಲಿ ಪಾಯಸ ಸೇರಿದಂತೆ ನಾನಾ ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ. 

ಮಾಡುವ ವಿಧಾನ : 18 ಔಷಧೀಯ ಗುಣವುಳ್ಳ ಗಿಡದ ಸೊಪ್ಪನ್ನು ನೀರಿನಲ್ಲಿ ಕುದಿಸಿದಾಗ ನೀರು ಕಡು ನೀಲಿ ಬಣ್ಣಕ್ಕೆ ತಿರುಗುತ್ತದೆ.  ಆ ನೀರಿಗೆ ತಕ್ಕ ಅಕ್ಕಿ ಹಾಕಿ ಬೇಯಿಸಿ (ಅಕ್ಕಿ ಪಾಯಸ ಮಾಡುವ ರೀತಿಯಲ್ಲೇ), ನಂತರ ಬೆಲ್ಲದ ನೀರು ಹಾಕಿ, ಚಿಟಿಕೆಯಷ್ಟು ಉಪ್ಪು ಹಾಕಿ ಕುದಿಸಿ. ನಂತರ ತುಪ್ಪದಲ್ಲಿ ಗೋಡಂಬಿ, ಹಾಗೂ ಚಿಕ್ಕದಾಗಿ ಕತ್ತರಿಸಿಟ್ಟ ತೆಂಗಿನಕಾಯಿ ತುಂಡು ಹುರಿದು ಪಾಯಸಕ್ಕೆ ಹಾಕಿದರೆ ಸವಿಯಲು ಆಟಿ ಪಾಯಸ ರೆಡಿ. 

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್